Friday, October 31, 2025

Rice series 8 | ರುಚಿರುಚಿಯಾದ ಅವರೆಕಾಳು ಪಲಾವ್: ಆಹಾ! ಏನ್ ರುಚಿ ಅಂತೀರಾ

ಚಳಿಯಾದ ವಾತಾವರಣ ಇರೋವಾಗ ಬೆಳಗ್ಗೆ ಬಿಸಿಯಾದ ಉಪಹಾರ ತಿಂದರೆ ಶರೀರಕ್ಕೂ ತಂಪು ತಟ್ಟುವುದಿಲ್ಲ ಮತ್ತು ಮನಸ್ಸಿಗೂ ಹಿತ. ಇಂತಹ ಸಮಯದಲ್ಲಿ ಅವರೆಕಾಳು ಪಲಾವ್ ಮಾಡಿದರೆ ರುಚಿಗೂ, ಆರೋಗ್ಯಕ್ಕೂ ಎರಡಕ್ಕೂ ಸೂಪರ್.

ಬೇಕಾಗುವ ಸಾಮಗ್ರಿಗಳು:

ಅಕ್ಕಿ – 2 ಕಪ್
ಅವರೆಕಾಳು – 1 ಕಪ್
ಕ್ಯಾರೇಟ್ – 1
ಈರುಳ್ಳಿ – 1
ಹಸಿಮೆಣಸಿನಕಾಯಿ – 4
ಟೊಮೆಟೋ – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಚಕ್ಕೆ, ಲವಂಗ – ಸ್ವಲ್ಪ
ಜೀರಿಗೆ – ಸ್ವಲ್ಪ
ಸೋಂಪು – ಸ್ವಲ್ಪ
ಅರಿಶಿಣ ಪುಡಿ – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಅಡುಗೆ ಎಣ್ಣೆ ಅಥವಾ ತುಪ್ಪ – ಅರ್ಧ ಕಪ್

ಮಾಡುವ ವಿಧಾನ:

ಒಂದು ಕುಕ್ಕರ್‌ನಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿದ ನಂತರ ಚಕ್ಕೆ, ಲವಂಗ, ಸೋಂಪು, ಜೀರಿಗೆ, ಕರಿಬೇವು ಹಾಕಿ ಸ್ವಲ್ಪ ಫ್ರೈ ಮಾಡಬೇಕು. ಈಗ ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಸೇರಿಸಿ ಬಣ್ಣ ಬದಲಾಯುವವರೆಗೆ ಹುರಿಯಬೇಕು. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಟೊಮೆಟೋ ಮತ್ತು ಉಪ್ಪು ಸೇರಿಸಿ ಮೃದುವಾಗುವವರೆಗೆ ಬೇಯಿಸಿ. ಈಗ ಅವರೆಕಾಳು ಹಾಗೂ ಕ್ಯಾರೇಟ್ ಸೇರಿಸಿ ಸ್ವಲ್ಪ ನೀರು ಹಾಕಿ 3-4 ನಿಮಿಷ ಬೇಯಿಸಬೇಕು.

ಕೊನೆಯಲ್ಲಿ ಅಕ್ಕಿ ಹಾಕಿ, ಅಳತೆಗೆ ತಕ್ಕಂತೆ ನೀರು ಸೇರಿಸಿ (1 ಕಪ್ ಅಕ್ಕಿಗೆ 2 ಕಪ್ ನೀರು), ಕೊತ್ತಂಬರಿ ಸೊಪ್ಪು ಸೇರಿಸಿ ಕುಕ್ಕರ್‌ ಮುಚ್ಚಿ 2 ಸೀಟಿ ಬರುವವರೆಗೆ ಬೇಯಿಸಬೇಕು.

error: Content is protected !!