ಬೆಳಗಿನ ಉಪಾಹಾರವಾಗಲಿ ಅಥವಾ ಮಧ್ಯಾಹ್ನದ ಲಂಚ್‌ಗೆ ಆಗಲಿ, ಸೌತೆಕಾಯಿ ಚಿತ್ರಾನ್ನ ಒಮ್ಮೆ ಮಾಡಿ ನೋಡಿ. ಲೈಟ್ ಮತ್ತು ರುಚಿಕರವಾದ ರೈಸ್ ತಿಂಡಿ ಇದು. ದೇಹಕ್ಕೆ ತಂಪು ನೀಡುವ ಗುಣ ಇರುವುದರಿಂದ ಇದು ಆರೋಗ್ಯಕರ ಆಯ್ಕೆಯೂ ಹೌದು.
ಬೇಕಾಗುವ ಪದಾರ್ಥಗಳು
ಅನ್ನ – 2 ಕಪ್
ಸೌತೆಕಾಯಿ – 1 ದೊಡ್ಡದು
ಹಸಿ ಮೆಣಸಿನಕಾಯಿ – 2
ಶುಂಠಿ – 1 ಟೀಸ್ಪೂನ್ (ತುರಿದದ್ದು)
ಕಡಲೆಬೇಳೆ – 1 ಟೇಬಲ್ ಸ್ಪೂನ್
ಉದ್ದಿನ ಬೇಳೆ – 1 ಟೇಬಲ್ ಸ್ಪೂನ್
ಸಾಸಿವೆ – 1 ಟೀಸ್ಪೂನ್
ಜೀರಿಗೆ – ½ ಟೀಸ್ಪೂನ್
ಕರಿಬೇವು – ಸ್ವಲ್ಪ
ಹಿಂಗು – ಚಿಟಿಕೆ
ಎಣ್ಣೆ – 2 ಟೇಬಲ್ ಸ್ಪೂನ್
ಉಪ್ಪು – ರುಚಿಗೆ ತಕ್ಕಂತೆ
ನಿಂಬೆ ರಸ – 1 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ
ಮಾಡುವ ವಿಧಾನ
ಒಂದು ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ ಹಾಕಿ ಸಿಡಿಯಲು ಬಿಡಿ. ನಂತರ ಜೀರಿಗೆ, ಕಡಲೆಬೇಳೆ, ಉದ್ದಿನ ಬೇಳೆ ಸೇರಿಸಿ ಚಿನ್ನದ ಬಣ್ಣ ಬರುವವರೆಗೆ ಹುರಿಯಿರಿ. ಈಗ ಹಸಿರು ಮೆಣಸಿನಕಾಯಿ, ಶುಂಠಿ, ಕರಿಬೇವು ಮತ್ತು ಹಿಂಗು ಸೇರಿಸಿ ಸ್ವಲ್ಪ ಹುರಿಯಿರಿ. ಅದಕ್ಕೆ ಕತ್ತರಿಸಿದ ಸೌತೆಕಾಯಿ ಸೇರಿಸಿ ಕೇವಲ 1–2 ನಿಮಿಷ ಮಾತ್ರ ಮಿಕ್ಸ್ ಮಾಡಿ. ಹೆಚ್ಚು ಬೇಯಿಸಬೇಡಿ, ಸೌತೆಕಾಯಿಯ ತಾಜಾತನ ಉಳಿಯಬೇಕು. ನಂತರ ಬೆಂಕಿ ಆರಿಸಿ, ಬೇಯಿಸಿದ ಅನ್ನ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಯಲ್ಲಿ ನಿಂಬೆ ರಸ ಹಾಕಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

