ಸಾಮಾನ್ಯ ಬಿರಿಯಾನಿಗಿಂತ ತುಸು ಹೆಚ್ಚು ಕಾರವಾಗಿರುವ ಆಂಧ್ರ ಸ್ಟೈಲ್ ಚಿಕನ್ ಬಿರಿಯಾನಿ, ಮಸಾಲೆ ಪ್ರಿಯರಿಗೆ ತುಂಬಾ ಇಷ್ಟವಾಗುತ್ತೆ. ಮನೆಯಲ್ಲೇ ಹೋಟೆಲ್ ಸ್ಟೈಲ್ ರುಚಿಯಲ್ಲಿ ಈ ಬಿರಿಯಾನಿಯನ್ನು ಸುಲಭವಾಗಿ ತಯಾರಿಸಬಹುದು.
ಬೇಕಾಗುವ ಸಾಮಗ್ರಿಗಳು:
ಬಾಸ್ಮತಿ ಅಕ್ಕಿ – 2 ಕಪ್
ಚಿಕನ್ – 500 ಗ್ರಾಂ
ಈರುಳ್ಳಿ – 3
ಟೊಮ್ಯಾಟೊ – 2
ಹಸಿಮೆಣಸು – 3–4
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 2 ಟೇಬಲ್‌ಸ್ಪೂನ್
ಮೊಸರು – ½ ಕಪ್
ಕೆಂಪು ಮೆಣಸಿನ ಪುಡಿ – 2 ಟೀಸ್ಪೂನ್
ಧನಿಯಾ ಪುಡಿ – 1 ಟೀಸ್ಪೂನ್
ಗರಂ ಮಸಾಲಾ – 1 ಟೀಸ್ಪೂನ್
ಅರಿಶಿನ – ½ ಟೀಸ್ಪೂನ್
ನಿಂಬೆ ರಸ – 1 ಟೇಬಲ್‌ಸ್ಪೂನ್
ಪುದಿನ, ಕೊತ್ತಂಬರಿ ಸೊಪ್ಪು – ಸ್ವಲ್ಪ
ಎಣ್ಣೆ/ತುಪ್ಪ – ಅಗತ್ಯಕ್ಕೆ ತಕ್ಕಷ್ಟು
ಉಪ್ಪು – ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ:
ಮೊದಲು ಚಿಕನ್‌ಗೆ ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕೆಂಪು ಮೆಣಸಿನ ಪುಡಿ, ಅರಿಶಿನ, ಧನಿಯಾ ಪುಡಿ, ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಕನಿಷ್ಠ 30 ನಿಮಿಷ ಮೆರಿನೇಟ್ ಮಾಡಿ.
ಅಕ್ಕಿಯನ್ನು ತೊಳೆದು 20 ನಿಮಿಷ ನೆನೆಸಿ, ನಂತರ ಉಪ್ಪು ಮತ್ತು ಸ್ವಲ್ಪ ಎಣ್ಣೆ ಹಾಕಿದ ನೀರಿನಲ್ಲಿ 70% ಬೇಯಿಸಿ ನೀರು ತೆಗೆದುಕೊಳ್ಳಿ.
ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆ ಅಥವಾ ತುಪ್ಪ ಬಿಸಿ ಮಾಡಿ ಈರುಳ್ಳಿ ಹಾಕಿ ಬಂಗಾರದ ಬಣ್ಣ ಬರುವವರೆಗೆ ಹುರಿಯಿರಿ. ನಂತರ ಹಸಿಮೆಣಸು, ಟೊಮ್ಯಾಟೊ ಸೇರಿಸಿ ಮೃದುವಾಗುವವರೆಗೆ ಬೇಯಿಸಿ. ಈಗ ಮೆರಿನೇಟ್ ಮಾಡಿದ ಚಿಕನ್ ಸೇರಿಸಿ ಮಧ್ಯಮ ಉರಿಯಲ್ಲಿ ಚೆನ್ನಾಗಿ ಬೇಯಿಸಿ, ಎಣ್ಣೆ ಮೇಲಕ್ಕೆ ಬರುವವರೆಗೆ ಕುದಿಯಲು ಬಿಡಿ.
ಈಗ ಚಿಕನ್ ಮೇಲೆಗೆ ಬೇಯಿಸಿದ ಅಕ್ಕಿ ಹಾಕಿ, ಗರಂ ಮಸಾಲಾ, ಪುದಿನ, ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸ ಹಾಕಿ ಮುಚ್ಚಿ ಕಡಿಮೆ ಉರಿಯಲ್ಲಿ 15–20 ನಿಮಿಷ ದಮ್ ಮಾಡಿ. ಉರಿ ಆರಿಸಿ 5 ನಿಮಿಷ ಬಿಡಿ, ನಂತರ ನಿಧಾನವಾಗಿ ಮಿಶ್ರಣ ಮಾಡಿ.

