ಸಾಮಾನ್ಯ ರೈಸ್‌ಗೆ ಸ್ವಲ್ಪ ಟ್ವಿಸ್ಟ್ ಕೊಡಬೇಕು ಅಂದ್ಕೊಂಡ್ರೆ ಈ High Protein Creamy Rice ಪರ್ಫೆಕ್ಟ್. ಕ್ರೀಮಿ ಟೆಕ್ಸ್ಚರ್, ಹೊಟ್ಟೆ ತುಂಬಿಸುವ ಪ್ರೋಟೀನ್ ಮತ್ತು ಲೈಟ್ ಫ್ಲೇವರ್ ವರ್ಕೌಟ್ ನಂತರ ಅಥವಾ ಆರೋಗ್ಯಕರ ಬ್ರೇಕ್ ಫಾಸ್ಟ್ ಗೆ ತುಂಬಾ ಸೂಕ್ತ. ವಿಶೇಷವಾಗಿ ಪ್ರೋಟೀನ್ ಬೇಕು ಅಂತ ಹುಡುಕೋರಿಗೆ ಈ ರೈಸ್ ರೆಸಿಪಿ ಒಳ್ಳೆಯ ಆಯ್ಕೆ.
ಈ ರೆಸಿಪಿಯಲ್ಲಿ ಸಾಮಾನ್ಯ ಅಕ್ಕಿಯ ಜೊತೆಗೆ ಕಡಿಮೆ ಕೊಬ್ಬಿನ ಹಾಲು, ಗ್ರೀಕ್ ಯೋಗರ್ಟ್ ಅಥವಾ ತುರಿದ ಪನೀರ್ ಬಳಸಲಾಗುತ್ತದೆ. ಇವು ದೇಹಕ್ಕೆ ಬೇಕಾದ ಪ್ರೋಟೀನ್ ನೀಡುತ್ತವೆ ಮತ್ತು ರೈಸ್‌ಗೆ ನೈಸರ್ಗಿಕ ಕ್ರೀಮಿ ಟೆಕ್ಸ್ಚರ್ ಕೊಡುತ್ತವೆ.
ಬೇಕಾಗುವ ಸಾಮಗ್ರಿಗಳು:
ಅನ್ನ, ಕಡಿಮೆ ಕೊಬ್ಬಿನ ಹಾಲು, ಗ್ರೀಕ್ ಯೋಗರ್ಟ್ ಅಥವಾ ಪನೀರ್, ಹಸಿರು ಬಟಾಣಿ ಅಥವಾ ಸ್ವೀಟ್ ಕಾರ್ನ್, ಈರುಳ್ಳಿ, ಬೆಳ್ಳುಳ್ಳಿ, ಕಾಳುಮೆಣಸು ಪುಡಿ, ಉಪ್ಪು, ಸ್ವಲ್ಪ ಆಲಿವ್ ಆಯಿಲ್ ಅಥವಾ ಬೆಣ್ಣೆ.
ತಯಾರಿಸುವ ವಿಧಾನ:
ಪ್ಯಾನ್‌ನಲ್ಲಿ ಸ್ವಲ್ಪ ಆಲಿವ್ ಆಯಿಲ್ ಬಿಸಿ ಮಾಡಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಸಾಫ್ಟ್ ಆಗುವವರೆಗೆ ಹುರಿಯಿರಿ. ನಂತರ ಬಟಾಣಿ ಅಥವಾ ಕಾರ್ನ್ ಹಾಕಿ ಒಂದು ನಿಮಿಷ ತಿರುಗಿಸಿ. ಈಗ ಅನ್ನ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಹಾಲು ಹಾಕಿ ಕಡಿಮೆ ಉರಿಯಲ್ಲಿ ಸ್ವಲ್ಪ ಸಮಯ ಕುದಿಸಿ. ಕೊನೆಯಲ್ಲಿ ಗ್ರೀಕ್ ಯೋಗರ್ಟ್ ಅಥವಾ ಪನೀರ್ ಸೇರಿಸಿ, ಉಪ್ಪು ಮತ್ತು ಮೆಣಸು ಹಾಕಿ ನಿಧಾನವಾಗಿ ಮಿಕ್ಸ್ ಮಾಡಿ.
ಯೋಗರ್ಟ್ ಅಥವಾ ಪನೀರ್ ಸೇರಿಸಿದ ನಂತರ ಹೆಚ್ಚು ಉರಿಯಲ್ಲಿ ಬೇಯಿಸಬೇಡಿ. ಇದರಿಂದ ರೈಸ್ ಹೆಚ್ಚು ಕ್ರೀಮಿ ಆಗಿ, ಪ್ರೋಟೀನ್ ಮೌಲ್ಯ ಉಳಿಯುತ್ತದೆ. ಬೇಕಿದ್ದರೆ ಮೇಲಿಂದ ಸ್ವಲ್ಪ ಸೀಡ್ಸ್ ಅಥವಾ ನಟ್‌ಸ್ ಸೇರಿಸಬಹುದು.


