ಒಂದೇ ಒಂದು ಪದಾರ್ಥ ಅನ್ನದ ರುಚಿಯನ್ನು ಸಂಪೂರ್ಣವಾಗಿ ಬದಲಿಸಬಹುದು ಎಂದರೆ ನಂಬ್ತೀರಾ?
ಆ ಪದಾರ್ಥವೇ ಬೆಳ್ಳುಳ್ಳಿ! ಎಣ್ಣೆಯಲ್ಲಿ ಹುರಿದಾಗ ಹರಡುವ ಅದರ ಘಮ, ಮಸಾಲೆಯ ಜೊತೆಗೆ ಸೇರಿದಾಗ ಸಾದಾ ಅನ್ನವೂ ಫುಲ್ flavour rice ಆಗಿ ಮಾರ್ಪಡುತ್ತೆ. ನಿನ್ನೆಯ ಉಳಿದ ಅನ್ನ ಇದ್ದರೂ ಹೊಸ ರುಚಿ ಬೇಕಾದ ದಿನಗಳಿಗೆ, ಕಡಿಮೆ ಸಮಯದಲ್ಲಿ ರೆಸ್ಟೋರೆಂಟ್ ಫೀಲ್ ಕೊಡುವ ಈ Masala Garlic Rice ಒಮ್ಮೆ ಟ್ರೈ ಮಾಡಿದ್ರೆ ಮತ್ತೆ ಮತ್ತೆ ಮಾಡ್ತೀರಾ ಅನ್ನೋದು ಪಕ್ಕಾ.
ಬೇಕಾಗುವ ಪದಾರ್ಥಗಳು
ಅನ್ನ – 2 ಕಪ್
ಬೆಳ್ಳುಳ್ಳಿ – 10–12 ಕೊತ್ತು (ಸಣ್ಣದಾಗಿ ಕತ್ತರಿಸಿದ್ದು)
ಎಣ್ಣೆ – 2 ಟೇಬಲ್ ಸ್ಪೂನ್
ಜೀರಿಗೆ – 1 ಟೀ ಸ್ಪೂನ್
ಈರುಳ್ಳಿ – 1
ಹಸಿಮೆಣಸು – 1–2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಅರಿಶಿನ ಪುಡಿ – ¼ ಟೀ ಸ್ಪೂನ್
ಕೆಂಪು ಮೆಣಸಿನ ಪುಡಿ – 1 ಟೀ ಸ್ಪೂನ್
ಧನಿಯಾ ಪುಡಿ – 1 ಟೀ ಸ್ಪೂನ್
ಗರಂ ಮಸಾಲಾ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಂತೆ
ಕೊತ್ತಂಬರಿ ಸೊಪ್ಪು – ಸ್ವಲ್ಪ
ನಿಂಬೆ ರಸ – 1 ಟೀ ಸ್ಪೂನ್
ತಯಾರಿಸುವ ವಿಧಾನ
ಒಂದು ಪ್ಯಾನ್ ನಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಜೀರಿಗೆ, ಕತ್ತರಿಸಿದ ಬೆಳ್ಳುಳ್ಳಿಯನ್ನು ಸೇರಿಸಿ, ಮಧ್ಯಮ ಬೆಂಕಿಯಲ್ಲಿ ಸ್ವಲ್ಪ ಬಣ್ಣ ಬರುವವರೆಗೆ ಹುರಿಯಿರಿ. ಬೆಳ್ಳುಳ್ಳಿಯ ಸುಗಂಧ ಚೆನ್ನಾಗಿ ಬರಬೇಕು.
ನಂತರ ಈರುಳ್ಳಿ ಮತ್ತು ಹಸಿಮೆಣಸು ಹಾಕಿ, ಈರುಳ್ಳಿ ಸ್ವಲ್ಪ ಮೃದುವಾಗುವವರೆಗೆ ಹುರಿಯಿರಿ. ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕುತ್ತಿದ್ದರೆ ಈಗ ಸೇರಿಸಿ, ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ, ಧನಿಯಾ ಪುಡಿ ಮತ್ತು ಗರಂ ಮಸಾಲಾ ಸೇರಿಸಿ ಚನ್ನಾಗಿ ಮಿಕ್ಸ್ ಮಾಡಿ.
ಈಗ ಬೇಯಿಸಿದ ಅನ್ನವನ್ನು ಸೇರಿಸಿ. ಉಪ್ಪು ಹಾಕಿ, ಅನ್ನ ಮುರಿಯದಂತೆ ನಿಧಾನವಾಗಿ ಮಿಕ್ಸ್ ಮಾಡಿ. 2–3 ನಿಮಿಷ ಕಡಿಮೆ ಬೆಂಕಿಯಲ್ಲಿ ಹುರಿದು, ಮಸಾಲೆ ಅನ್ನಕ್ಕೆ ಚೆನ್ನಾಗಿ ಬೆರೆಸಿಕೊಳ್ಳುವಂತೆ ಮಾಡಿ. ಕೊನೆಗೆ ನಿಂಬೆ ರಸ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿ.


