ಫ್ರಿಜ್ ತೆರೆದು ನೋಡಿದಾಗ ನಿನ್ನೆ ರಾತ್ರಿಯ ಉಳಿದಿರುವ ಅನ್ನ ಕಣ್ಣಿಗೆ ಬಿದ್ರೆ, ಅದಕ್ಕೆ ಸ್ವಲ್ಪ ಚೀಸ್, ಸ್ವಲ್ಪ ಸ್ವೀಟ್ ಕಾರ್ನ್ ಸೇರಿಸಿದ್ರೆ ಸಾಕು ಹೊಸತಾದ Cheese Corn Rice ತಯಾರಾಗುತ್ತೆ . ಜಾಸ್ತಿ ಮಸಾಲೆ ಇಲ್ಲ, ಜಾಸ್ತಿ ಶ್ರಮವೂ ಇಲ್ಲ… ಆದ್ರೂ ತಿಂದಾಗ “ವಾವ್” ಅನ್ನಿಸುವ ರುಚಿ.
ಬೇಕಾಗುವ ಸಾಮಗ್ರಿಗಳು:
ಅನ್ನ – 2 ಕಪ್
ಸ್ವೀಟ್ ಕಾರ್ನ್ – 1 ಕಪ್
ಬೆಣ್ಣೆ (Butter) – 1 ಟೇಬಲ್‌ಸ್ಪೂನ್
ಬೆಳ್ಳುಳ್ಳಿ – 1 ಟೀಸ್ಪೂನ್
ಈರುಳ್ಳಿ – 1 ಸಣ್ಣದು
ಕ್ಯಾಪ್ಸಿಕಂ – ½ ಕಪ್ (ಐಚ್ಛಿಕ)
ಚೀಸ್ – ½ ಕಪ್ (ಗ್ರೇಟೆಡ್ / ಕ್ಯೂಬ್)
ಹಾಲು – 2 ಟೇಬಲ್‌ಸ್ಪೂನ್
ಉಪ್ಪು – ರುಚಿಗೆ ತಕ್ಕಂತೆ
ಮೆಣಸಿನ ಪುಡಿ – ½ ಟೀಸ್ಪೂನ್
ಒರೆಗಾನೋ / ಮಿಕ್ಸ್‌ಡ್ ಹರ್ಬ್ಸ್ – ½ ಟೀಸ್ಪೂನ್
ಚಿಲ್ಲಿ ಫ್ಲೇಕ್ಸ್ – ಸ್ವಲ್ಪ
ತಯಾರಿಸುವ ವಿಧಾನ:
ಒಂದು ಪ್ಯಾನ್‌ನಲ್ಲಿ ಬೆಣ್ಣೆ ಹಾಕಿ ಕರಗಿದ ಮೇಲೆ ಬೆಳ್ಳುಳ್ಳಿಯನ್ನು ಹಾಕಿ ಸ್ವಲ್ಪ ಸುಗಂಧ ಬರುವವರೆಗೆ ಹುರಿಯಿರಿ.
ಇದಕ್ಕೆ ಈರುಳ್ಳಿ ಸೇರಿಸಿ ಸಾಫ್ಟ್ ಆಗುವವರೆಗೆ ಹುರಿಯಿರಿ. ನಂತರ ಕ್ಯಾಪ್ಸಿಕಂ ಹಾಕಿ 1 ನಿಮಿಷ ಫ್ರೈ ಮಾಡಿ.
ಈಗ ಬೇಯಿಸಿದ ಸ್ವೀಟ್ ಕಾರ್ನ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಉಪ್ಪು, ಮೆಣಸಿನ ಪುಡಿ, ಒರೆಗಾನೋ ಮತ್ತು ಚಿಲ್ಲಿ ಫ್ಲೇಕ್ಸ್ ಸೇರಿಸಿ ಕಲಸಿ.
ಈಗ ಬೇಯಿಸಿದ ಅನ್ನ ಹಾಕಿ ನಿಧಾನವಾಗಿ ಮಿಕ್ಸ್ ಮಾಡಿ. ಹಾಲು ಸೇರಿಸಿ ಅನ್ನ ಡ್ರೈ ಆಗದಂತೆ ಕಲಸಿ. ಕೊನೆಗೆ ಚೀಸ್ ಸೇರಿಸಿ ಕಡಿಮೆ ಉರಿಯಲ್ಲಿ 1–2 ನಿಮಿಷ ಮುಚ್ಚಿ ಬಿಡಿ. ಚೀಸ್ ಕರಗಿದರೆ ಸಾಕು.



