February 23, 2026
Monday, February 23, 2026
spot_img

Rice series 99 | ಬ್ರೆಡ್, ಉಪ್ಮಾ, ದೋಸೆ ಬೋರು: ಈ ಆಲೂ ಫ್ರೈಡ್ ರೈಸ್ ಬೆಸ್ಟು! ಏನಂತೀರಾ?

ಬೆಳಗಿನ ಉಪಾಹಾರ ಅಂದ್ರೆ ಬರೇ ತಿಂಡಿ ತಿನ್ನೋದು ಅಷ್ಟೇ ಅಲ್ಲ… ನಿದ್ದೆಯಿಂದ ಎದ್ದ ಕೂಡಲೇ ಮನಸ್ಸು ಕೇಳೋದು “ಏನಾದ್ರೂ ಸ್ವಲ್ಪ ಡಿಫರೆಂಟ್ ಬೇಕು” ಅಂತ. ದಿನವಿಡೀ ಎನರ್ಜಿ ಕೊಡೋ ಹಾಗೆ, ಆದರೆ ಭಾರವಾಗದೇ ಹೊಟ್ಟೆ ತುಂಬಿಸುವ ಉಪಾಹಾರ ಇದ್ದರೆ ಸಾಕು ಅಲ್ವಾ? ಬ್ರೆಡ್–ಉಪ್ಮಾ–ದೋಸೆ ಬೋರ್ ಆಗಿರುವ ದಿನಗಳಲ್ಲಿ, ಅನ್ನ ಉಳಿದಿದ್ದರೆ ಅದನ್ನೇ ಚುರುಕಾದ ಬೆಳಗಿನ ಉಪಾಹಾರವಾಗಿ ಬದಲಾಯಿಸಬಹುದು.

ಬೇಕಾಗುವ ಪದಾರ್ಥಗಳು:

ಅನ್ನ – 2 ಕಪ್
ಆಲೂಗಡ್ಡೆ – 2
ಎಣ್ಣೆ – 2 ಟೇಬಲ್ ಸ್ಪೂನ್
ಜೀರಿಗೆ – 1 ಟೀ ಸ್ಪೂನ್
ಬೆಳ್ಳುಳ್ಳಿ – 1 ಟೇಬಲ್ ಸ್ಪೂನ್
ಹಸಿಮೆಣಸು – 1–2
ಈರುಳ್ಳಿ – 1
ಕ್ಯಾಪ್ಸಿಕಂ – ½ ಕಪ್
ಅರಿಶಿನ – ¼ ಟೀ ಸ್ಪೂನ್
ಕೆಂಪು ಮೆಣಸಿನ ಪುಡಿ – ½ ಟೀ ಸ್ಪೂನ್
ಗರಂ ಮಸಾಲಾ – ¼ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಸೋಯಾ ಸಾಸ್ – 1 ಟೀ ಸ್ಪೂನ್ (ಐಚ್ಛಿಕ)

ಮಾಡುವ ವಿಧಾನ:

ಮೊದಲು ಒಂದು ದೊಡ್ಡ ಪ್ಯಾನ್ ನಲ್ಲಿ ಎಣ್ಣೆ ಬಿಸಿ ಮಾಡಿ. ಅದಕ್ಕೆ ಜೀರಿಗೆ ಹಾಕಿ ಸಿಡಿದ ಬಳಿಕ ಬೆಳ್ಳುಳ್ಳಿ ಮತ್ತು ಹಸಿಮೆಣಸು ಸೇರಿಸಿ ಸ್ವಲ್ಪ ಹುರಿಯಿರಿ. ಈಗ ಈರುಳ್ಳಿ ಹಾಕಿ ಫ್ರೈ ಮಾಡಿ. ನಂತರ ಆಲೂಗಡ್ಡೆ ತುಂಡುಗಳನ್ನು ಸೇರಿಸಿ ಮಧ್ಯಮ ಉರಿಯಲ್ಲಿ ಚೆನ್ನಾಗಿ ಫ್ರೈ ಮಾಡಿ. ಹೊರಗೆ ಕ್ರಿಸ್ಪಿಯಾಗಿ ಒಳಗೆ ಸಾಫ್ಟ್ ಆಗುವವರೆಗೆ ಹುರಿಯುವುದು ಮುಖ್ಯ.

ಆಲೂಗಡ್ಡೆ ಚೆನ್ನಾಗಿ ಫ್ರೈ ಆದ ನಂತರ ಅರಿಶಿನ, ಕೆಂಪು ಮೆಣಸಿನ ಪುಡಿ, ಗರಂ ಮಸಾಲಾ ಮತ್ತು ಉಪ್ಪು ಸೇರಿಸಿ ಮಿಕ್ಸ್ ಮಾಡಿ. ಕ್ಯಾಪ್ಸಿಕಂ ಬಳಸುತ್ತಿದ್ದರೆ ಈ ಹಂತದಲ್ಲಿ ಸೇರಿಸಿ ಒಂದು ನಿಮಿಷ ಹುರಿಯಿರಿ. ಈಗ ಅನ್ನವನ್ನು ಸೇರಿಸಿ ನಿಧಾನವಾಗಿ ಕಲಸಿ, ಅನ್ನ ಮುರಿಯದಂತೆ ಜಾಗ್ರತೆ ವಹಿಸಿ. ಇಂಡೋ-ಚೈನೀಸ್ ಟಚ್ ಬೇಕಾದರೆ ಸ್ವಲ್ಪ ಸೋಯಾ ಸಾಸ್ ಸೇರಿಸಬಹುದು.

ಎಲ್ಲವೂ ಚೆನ್ನಾಗಿ ಮಿಕ್ಸ್ ಆದ ನಂತರ 2–3 ನಿಮಿಷ ಲೋ ಫ್ಲೇಮ್‌ನಲ್ಲಿ ಸ್ಟೀಮ್ ಆಗಲು ಬಿಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಗ್ಯಾಸ್ ಆಫ್ ಮಾಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !