ಹೊಸ ದಿಗಂತ ಡಿಜಿಟಲ್ ಡೆಸ್ಕ್;
ಸ್ಟಾರ್ ನಟ-ನಿರ್ದೇಶಕ ರಿಷಬ್ ಶೆಟ್ಟಿ ಕಾಂತಾರ ಪ್ರೀಕ್ವೆಲ್ ಸಿನಿಮಾದ ನಿರ್ಮಾಣದಲ್ಲಿ ಬ್ಯುಸಿ ಆಗಿದ್ದು,ಇದರ ಜೊತೆಗೆ ‘ಜೈ ಹುನುಮಾನ್’ ಹಾಗೂ ‘ಛತ್ರಪತಿ ಶಿವಾಜಿ ಮಹಾರಾಜ್’ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಆದರೆ ಇದೀಗ ಮತ್ತೊಂದು ಹೊಸ ಸಿನಿಮಾ ಘೋಷಣೆ ಆಗಿದೆ. ಅದು ಕನ್ನಡದ ಸಿನಿಮಾ ಅಲ್ಲ, ಟಾಲಿವುಡ್ ಸಿನಿಮಾ.
ಕನ್ನಡದ ‘ಡಿವೈನ್ ಸ್ಟಾರ್’ ಖ್ಯಾತಿ ನಟ ರಿಷಬ್ ಶೆಟ್ಟಿ ನಟನೆಯ ಹೊಸ ಟಾಲಿವುಡ್ ಸಿನಿಮಾ ಇದೀಗ ಘೋಷಣೆ ಆಗಿದೆ. ರಾಜಮೌಳಿ ಗರಡಿಯಲ್ಲಿ ಪಳಗಿದ ಅಶ್ವಿನ್ ಗಂಗರಾಜು ಅವರು ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.
ತೆಲುಗು ನಿರ್ಮಾಣ ಸಂಸ್ಥೆ ‘ಸಿತಾರಾ ಎಂಟರ್‌ಟೈನ್‌ಮೆಂಟ್ ಅಧೀಕೃತವಾಗಿ ಐತಿಹಾಸಿಕ/ ಪೌರಾಣಿಕ ನಾಟಕದ ಪ್ರಾಜೆಕ್ಟ್‌ನಲ್ಲಿ ನಟಿಸುತ್ತಿದ್ದಾರೆ ಎಂದು ಘೋಷಿಸಿದೆ. ಇದರ ಜೊತಗೆ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ತನ್ನ ಘೋಷಣೆಗೆ ಸಾಕ್ಷಿ ಸಹ ನೀಡಿದೆ. ಜೊತೆಗೆ, ‘ಎಲ್ಲಾ ಬಂಡಾಯಗಾರರೂ ಯುದ್ಧದಲ್ಲಿ ಹುಟ್ಟುವುದಿಲ್ಲ. ವಿಧಿ ಕೆಲವರನ್ನು ಆಯ್ಕೆ ಮಾಡುತ್ತದೆ. ಇದು ಬಂಡಾಯಗಾರನ ಕಥೆ’ ಎಂದು ಪೋಸ್ಟರ್‌ಗೆ ಶೀರ್ಷಿಕೆ ನೀಡಲಾಗಿದೆ.
18ನೇ ಶತಮಾನದ ಪ್ರಕ್ಷುಬ್ಧ ಬಂಗಾಳದ ಪ್ರಾಂತ್ಯದಲ್ಲಿ ಬಂಡಾಯಗಾರರ ಹೊರಹೊಮ್ಮುವಿಕೆಯ ಚಿತ್ರ ಇದಾಗಿರುತ್ತದೆ ಎನ್ನಲಾಗಿದೆ. ಈ ಸಿನಿಮಾದ ಬಗ್ಗೆ ಮಿಕ್ಕೆಲ್ಲಾ ಮಾಹಿತಿಗಳೂ ಸದ್ಯದಲ್ಲೇ ಹೊರಬೀಳಲಿವೆ ಎನ್ನಲಾಗಿದೆ.