Saturday, October 18, 2025

‘ಎಂಡ ಮೋಣೆ ದಿನೇಶ’ ಎನ್ನುತ್ತಾ ಎಂಟ್ರಿಕೊಟ್ಟ ರಿಷಬ್​ ಶೆಟ್ಟಿ: ರಜನಿ, ಮೋಹನ್​ಲಾಲ್ ಸ್ಟೈಲ್​ ಗೆ ಬಚ್ಚನ್​ ಫಿದಾ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಮಿತಾಭ್​ ಬಚ್ಚನ್​ ಅವರು ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್ಪತಿ’ ಶೋ ನಲ್ಲಿ ನಟ ರಿಷಬ್​ ಶೆಟ್ಟಿ ಭಾಗವಹಿಸಿದ್ದು,ರಿಷಬ್ ಶೆಟ್ಟಿ ಅವರು ಅಂತಿಮವಾಗಿ ಎಷ್ಟು ಕೋಟಿ ರೂಪಾಯಿ ಗೆಲ್ಲುತ್ತಾರೆ ಎನ್ನುವ ಕುತೂಹಲ ಮೂಡಿದೆ.

ಇದರ ಪ್ರೋಮೋನ ಸೋನಿ ವಾಹಿನಿ ಬಿಡುಗಡೆ ಮಾಡಿದೆ. ಇದರಲ್ಲಿ ರಿಷಬ್ ಅವರು ರಜನಿಕಾಂತ್ ಹಾಗೂ ಮೋಹನ್​ಲಾಲ್​ ಸ್ಟೈಲ್​ನ ಅನುಕರಿಸಿದ್ದಾರೆ. ಈ ಸಂಚಿಕೆಯಲ್ಲಿ ಆಗಮಿಸಿರುವ ರಿಷಬ್​ ಶೆಟ್ಟಿ ಅವರು ರಜನಿಕಾಂತ್​ ಅವರ ಕುರಿತು ಮಾತನಾಡಿದ್ದಾರೆ.

ಅಲ್ಲಿದ್ದ ಒಬ್ಬರು ರಿಷಬ್​ ಶೆಟ್ಟಿ ಅವರು ರಜನಿಕಾಂತ್​ ಅವರ ನಡಿಗೆಯನ್ನು ಚೆನ್ನಾಗಿ ತೋರಿಸುತ್ತಾರೆ ಎಂದಾಗ ಅಮಿತಾಭ್​ ಬಚ್ಚನ್​ ತೋರಿಸುವಂತೆ ಹೇಳಿದ್ದಾರೆ.

2000ನೇ ಇಸ್ವಿಯಲ್ಲಿ ಬಂದ ‘ನರಸಿಂಹಂ’ ಚಿತ್ರದಲ್ಲಿ ಮೋಹನ್​ಲಾಲ್ ಅವರು ‘ಎಂಡ ಮೋಣೆ ದಿನೇಶ’ ಎಂದು ಡೈಲಾಗ್ ಹೇಳುತ್ತಾರೆ. ಈ ಡೈಲಾಗ್​ನ ಹೊಡೆದು, ರಿಷಬ್ ಲುಂಗಿ ಕಟ್ಟಿದ್ದಾರೆ. ಇನ್ನು, ರಜನಿಕಾಂತ್ ವಾಕಿಂಗ್ ಸ್ಟೈಲ್​ನ ರಿಷಬ್ ಅನುಕರಿಸಿ ತೋರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ರಿಷಬ್ ಸ್ಟೈಲ್​ಗೆ ಎಲ್ಲರೂ ಫಿದಾ ಆಗಿದ್ದಾರೆ. ಸ್ಟೈಲ್​ ನೋಡಿ ಖುದ್ದು ಅಮಿತಾಭ್​ ಬೆರಗಾಗಿದ್ದಾರೆ.

ಕೊನೆಗೆ ರಿಷಬ್​ ಶೆಟ್ಟಿ ಅವರು ಅಮಿತಾಭ್ ಅವರಿಗೆ ಅಗ್ನಿಪಥ್​ ಚಿತ್ರದ ಡೈಲಾಗ್​ ಹೇಳುವಂತೆ ಅಮಿತಾಭ್​ ಅವರನ್ನು ಕೋರಿದ್ದಾರೆ. ಇಷ್ಟು ವರ್ಷವಾದರೂ ಆ ಸಿನಿಮಾದ ಡೈಲಾಗ್​ ನೆನಪಿಟ್ಟುಕೊಂಡಿರುವ ಅಮಿತಾಭ್​ ಅದನ್ನು ಹೇಳಿದಾಗ, ಇಡೀ ಸಭೆಯಲ್ಲಿ ಚಪ್ಪಾಳೆಗಳ ಸುರಿಮಳೆ ಸುರಿದಿದೆ.

‘ಕೌನ್ ಬನೇಗಾ ಕರೋಡ್ಪತಿ’ ಕಾರ್ಯಕ್ರಮದಲ್ಲಿ ಅವರು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅವರು ಎಷ್ಟು ಹಣ ಗೆಲ್ಲುತ್ತಾರೆ ಎಂಬ ಕುತೂಹಲ ಮೂಡಿದೆ.

error: Content is protected !!