Tuesday, November 4, 2025

ರಿಷಭ್ ಪಂತ್ ಕಮ್ ಬ್ಯಾಕ್ ಮ್ಯಾಚ್! India A vs South Africa A ಟೆಸ್ಟ್ ಸರಣಿ ಆರಂಭ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟ್ ಅಭಿಮಾನಿಗಳು ನಿರೀಕ್ಷಿಸಿದ್ದ ಕ್ಷಣ ಕೊನೆಗೂ ಬಂದಿದೆ. ಭಾರತ ಎ ಮತ್ತು ಸೌತ್ ಆಫ್ರಿಕಾ ಎ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಇಂದು ಬೆಂಗಳೂರಿನ ಸೆಂಟ್ರಲ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ಆರಂಭವಾಗಿದೆ. ಟಾಸ್ ಗೆದ್ದ ಟೀಮ್ ಇಂಡಿಯಾ ಎ ನಾಯಕ ರಿಷಭ್ ಪಂತ್ ಬೌಲಿಂಗ್ ಆಯ್ದುಕೊಂಡಿದ್ದು, ಸೌತ್ ಆಫ್ರಿಕಾ ಎ ತಂಡ ಮೊದಲ ಇನಿಂಗ್ಸ್ ಆರಂಭಿಸಿದೆ.

ಈ ಪಂದ್ಯವು ಪಂತ್ ಅವರ ಕಂಬ್ಯಾಕ್ ಮ್ಯಾಚ್ ಎಂಬುದರಿಂದಲೇ ವಿಶೇಷ ಮಹತ್ವ ಪಡೆದುಕೊಂಡಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗಂಭೀರ ಗಾಯಗೊಂಡಿದ್ದ ಪಂತ್, ಹಲವು ತಿಂಗಳ ವಿಶ್ರಾಂತಿಯ ನಂತರ ಇದೀಗ ಸಂಪೂರ್ಣ ಫಿಟ್ ಆಗಿ ಮೈದಾನಕ್ಕಿಳಿದಿದ್ದಾರೆ.

ಭಾರತ ಎ ತಂಡದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಪ್ರತಿಭಾವಂತ ಆಟಗಾರರ ಸಂಯೋಜನೆ ಕಂಡುಬಂದಿದ್ದು, ಆರಂಭಿಕರಾಗಿ ಸಾಯಿ ಸುದರ್ಶನ್ ಮತ್ತು ಆಯುಷ್ ಮ್ಹಾತ್ರೆ ಬ್ಯಾಟಿಂಗ್ ಆರಂಭಿಸಲಿದ್ದಾರೆ. ಅವರ ನಂತರ ಮೂರನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್, ನಾಲ್ಕನೇ ಕ್ರಮಾಂಕದಲ್ಲಿ ರಜತ್ ಪಾಟಿದಾರ್, ಹಾಗೂ ಐದನೇ ಕ್ರಮಾಂಕದಲ್ಲಿ ನಾಯಕ ರಿಷಭ್ ಪಂತ್ ಕಣಕ್ಕಿಳಿಯಲಿದ್ದಾರೆ.

ಆರುನೇ ಕ್ರಮಾಂಕದಲ್ಲಿ ಆಯುಷ್ ಬದೋನಿ, ಏಳನೇ ಕ್ರಮಾಂಕದಲ್ಲಿ ಆಲ್‌ರೌಂಡರ್ ತನುಷ್ ಕೋಟ್ಯಾನ್ ಕಾಣಿಸಿಕೊಳ್ಳಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಅನ್ಶುಲ್ ಕಂಬೋಜ್, ಗುರ್ನೂರ್ ಬ್ರಾರ್, ಖಲೀಲ್ ಅಹ್ಮದ್ ವೇಗಿಗಳಾಗಿ ಅವಕಾಶ ಪಡೆದರೆ, ಮಾನವ್ ಸುತಾರ್ ಸ್ಪಿನ್ನರ್ ಆಗಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ದಾರೆ.

error: Content is protected !!