Sunday, November 9, 2025

IMDB ಇಂಡಿಯಾ ಟ್ರೆಂಡ್​ನಲ್ಲಿ ಟಾಪ್ 2 ಸ್ಥಾನ ಪಡೆದ ರಿಷಭ್-ರುಕ್ಮಿಣಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಾಂತಾರ ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರದ ಕಲೆಕ್ಷನ್ ಸಾವಿರ ಕೋಟಿ ರೂಪಾಯಿ ಸಮೀಪಿಸುತ್ತಿದೆ. ರಿಷಬ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೆಂಡ್ ಆಗುತ್ತಿದೆ. ರಿಷಬ್ ಹಾಗೂ ರುಕ್ಮಿಣಿ ಹೆಸರು ಐಎಂಡಿಬಿ ಇಂಡಿಯಾ ಟ್ರೆಂಡ್​ನಲ್ಲಿ ಅನುಕ್ರಮವಾಗಿ ಒಂದು ಹಾಗೂ ಎರಡನೇ ಸ್ಥಾನ ಪಡೆದುಕೊಂಡಿವೆ.

ವಾರದ ಟ್ರೆಂಡ್​ನ ಐಎಂಡಿಬಿ ಇಂಡಿಯಾ ಬಿಡುಗಡೆ ಮಾಡಿದೆ. ಇದರಲ್ಲಿ ರಿಷಬ್ ಮೊದಲ ಸ್ಥಾನ ಪಡೆದರೆ, ರುಕ್ಮಿಣಿ ವಸಂತ್​ಗೆ ಎರಡನೇ ಸ್ಥಾನ ಸಿಕ್ಕಿದೆ. ಮೂರನೇ ಸ್ಥಾನದಲ್ಲಿ ಮೋನಾ ಸಿಂಗ್ ಹೆಸರು ಇದೆ. ನಾಲ್ಕನೇ ಸ್ಥಾನದಲ್ಲಿ ಹೃತಿಕ್ ರೋಷನ್ ಇದ್ದಾರೆ.

error: Content is protected !!