ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದ ಮೊಹಾನಿಯಾ ವಿಧಾನಸಭಾ ಕ್ಷೇತ್ರದ ಆರ್‌ಜೆಡಿ ಅಭ್ಯರ್ಥಿ ಶ್ವೇತಾ ಸುಮನ್ ನಾಮಪತ್ರ ತಿರಸ್ಕೃತಗೊಂಡಿದೆ.
ಶ್ವೇತಾ ಸುಮನ್ ಉತ್ತರ ಪ್ರದೇಶದ ನಿವಾಸಿ ಹಾಗೂ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂಬ ಕಾರಣಕ್ಕಾಗಿ ಅವರ ನಾಮಪತ್ರವನ್ನು ಚುನಾವಣಾ ಆಯೋಗ ರದ್ದುಗೊಳಿಸಿದೆ. ಈ ಮೂಲಕ ಮಹಾಘಟಬಂಧನ್ ಮೈತ್ರಿಕೂಟಕ್ಕೆ ಮತ್ತೊಂದು ಹಿನ್ನಡೆಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ವೇತಾ ಸುಮನ್, ಬಿಜೆಪಿ ಸಂವಿಧಾನವನ್ನು ಮುಗಿಸಲು ಹೊರಟಿದೆ. ನಾಮಪತ್ರ ತಿರಸ್ಕರಿಸಲು ಅಧಿಕಾರಿಗಳ ಮೇಲೆ ಒತ್ತಡ ಹಾಕಲಾಗಿತ್ತು. ಅಧಿಕಾರಿಗಳು ಅಸಹಾಯಕರು, ನಾನು ಖಂಡಿತವಾಗಿಯೂ ಕೋರ್ಟ್‌ಗೆ ಹೋಗುತ್ತೇನೆ.
ಇಲ್ಲಿನ ಬಿಜೆಪಿ ಅಭ್ಯರ್ಥಿ ಸಂಗೀತಾ, ಅಧಿಸೂಚನೆ ದಿನಾಂಕದ ನಂತರ ತಮ್ಮ ಜಾತಿ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಆದರೆ ಅವರು ಬಿಜೆಪಿಯಿಂದ ಬಂದವರಾಗಿರುವುದರಿಂದ ಏನೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಮಾತನಾಡುವ ವೇಳೆ ಅವರು ಕಣ್ಣೀರಿಟ್ಟಿದ್ದಾರೆ.
ಆರ್‌ಜೆಡಿ ಅಭ್ಯರ್ಥಿ ಶ್ವೇತಾ ಸುಮನ್ ನಾಮಪತ್ರ ರಿಜೆಕ್ಟ್: ಮೀಡಿಯಾ ಮುಂದೆ ಕಣ್ಣೀರು

