Saturday, October 11, 2025

ಬೆಂಗಳೂರಲ್ಲಿ ವಾಯುಮಾಲಿನ್ಯ ಹೆಚ್ಚಾಗೋಕೆ ರಸ್ತೆಗುಂಡಿ ಕಾರಣ ಅಂತೆ! ನಾವ್ ಹೇಳ್ತಿಲ್ಲ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ವಾತಾವರಣ ದಿನೇ ದಿನೇ ಹದಗೆಡುತ್ತಿದ್ದು, ನಾಗರಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿರುವಂತೆ, ನಗರದಲ್ಲಿ ವಾಹನಗಳಿಂದ ಉಂಟಾಗುವ ಹೊಗೆ, ಧೂಳಿನ ಕಣಗಳು ಹಾಗೂ ರಸ್ತೆಗುಂಡಿಗಳು ವಾಯುಮಾಲಿನ್ಯ ಹೆಚ್ಚಳಕ್ಕೆ ಪ್ರಮುಖ ಕಾರಣಗಳಾಗಿವೆ.

ಬೆಂಗಳೂರು ನಗರದ ರಸ್ತೆಗಳಲ್ಲಿ ಹೆಚ್ಚುತ್ತಿರುವ ವಾಹನದಟ್ಟಣೆ ಹಾಗೂ ಲೇಔಟ್ ನಿರ್ಮಾಣದ ವೇಳೆ ಮರಗಳ ಕಡಿತ, ಇದರಿಂದಾಗಿ ವಾತಾವರಣಕ್ಕೆ ಕಾರ್ಬನ್ ಡೈಆಕ್ಸೈಡ್ ಮತ್ತು ಪಾರ್ಟಿಕ್ಯುಲೇಟ್ ಮ್ಯಾಟರ್ ಸೇರುತ್ತಿದೆ. ಬೃಹತ್ ರಸ್ತೆ ಗುಂಡಿಗಳಿಂದ ವಾತಾವರಣಕ್ಕೆ ಧೂಳಿನ ಕಣಗಳು ವಾತಾವರಣ ಸೇರಲು ಕಾರಣವಾಗುತ್ತಿದ್ದು, ನಗರದ ವಾಯುಮಾಲಿನ್ಯ ಮತ್ತಷ್ಟು ಹೆಚ್ಚುತ್ತಿದೆ.

ಸಾಲಿಡ್ವೇಟ್ ವರದಿ ಪ್ರಕಾರ, 2024ರಲ್ಲಿ 28ನೇ ಸ್ಥಾನ ಪಡೆದ ಬೆಂಗಳೂರು, 2025ರ ಸ್ವಚ್ಚ ಸರ್ವೇಕ್ಷಣೆಯಲ್ಲಿ 36ನೇ ಸ್ಥಾನಕ್ಕೆ ಕುಸಿದಿದ್ದು, ವಾತಾವರಣದ ಹಾನಿ ಹಾಗೂ ಮಾಲಿನ್ಯದ ಪ್ರಮಾಣವನ್ನು ನಿರೂಪಿಸುತ್ತದೆ. ಇಂತಹ ಪರಿಸ್ಥಿತಿ ನಾಗರಿಕರ ಆರೋಗ್ಯ, ವಿಶೇಷವಾಗಿ ಜೀವಿತಾವಧಿಗೆ ನೇರವಾಗಿ ದುಷ್ಪರಿಣಾಮ ಬೀರುತ್ತಿದ್ದು, ಆಯಸ್ಸು ಸರಾಸರಿ 2 ವರ್ಷ ಕಡಿಮೆಯಾಗುವ ಸಾಧ್ಯತೆಯಾಗಿದೆ.

error: Content is protected !!