March 1, 2026
Sunday, March 1, 2026
spot_img

ರೋಸ್ಟನ್, ಹೋಲ್ಡರ್, ಪೊವೆಲ್ ಬೊಂಬಾಟ್ ಬ್ಯಾಟಿಂಗ್: ಭಾರತ ಗೆಲುವಿಗೆ ಬಿಗ್ ಟಾರ್ಗೆಟ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ರೋಸ್ಟನ್ ಚೇಸ್ , ಜೇಸನ್ ಹೋಲ್ಡರ್, ರೋವ್ಮನ್ ಪೊವೆಲ್ ಭರ್ಜರಿ ಬ್ಯಾಟಿಂಗ್ ನಡೆಸಿದ್ದು, ಈ ಮೂಲಕ ವೆಸ್ಟ್ ಇಂಡೀಸ್ ತಂಡ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 195 ರನ್​ಗಳಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ್ದ ವೆಸ್ಟ್ ಇಂಡೀಸ್​ ತಂಡ ನಿಧಾನಗತಿ ಆರಂಭ ಪಡೆದುಕೊಂಡಿತು. ಹೋಪ್ 33 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 32 ರನ್​ಗಳಿಸಿ ನಿರ್ಗಮಿಸಿದರು. ನಂತರ ಬಂದ ಹೆಟ್ಮೇಯರ್ ಕೇವಲ 12 ಎಸೆತಗಳಲ್ಲಿ 27 ರನ್​ಗಳಿಸಿ ಅಪಾಯಕಾರಿಯಾಗುತ್ತಿದ್ದರು. ಆದರೆ ಬುಮ್ರಾ ಬೌಲಿಂಗ್​​ನಲ್ಲಿ ಕೀಪರ್ ಸಂಜು ಸ್ಯಾಮ್ಸನ್​​ಗೆ ಕ್ಯಾಚ್ ನೀಡಿ ಔಟ್ ಆದರು. ಅದೇ ಓವರ್​ನಲ್ಲಿ ಬುಮ್ರಾ 240 ರನ್​ಗಳಿಸಿದ್ದ ರೋಸ್ಟನ್ ಚೇಸ್ ವಿಕೆಟ್ ಕೂಡ ಪಡೆದರು.

ಶೆರ್ಫಾನ್ ರುದರ್ಫೋಡ್ 9 ಎಸೆತಗಳಲ್ಲಿ ಕೇವಲ 11 ರನ್​ಗಳಿಸಿ ಹಾರ್ದಿಕ್ ಪಾಂಡ್ಯಗೆ ವಿಕೆಟ್​ ನೀಡಿದರು. ಆದರೆ ಕೊನೆಯ 6 ಓವರ್​ಗಳಲ್ಲಿ ಅಬ್ಬರಿಸಿದ ರೋವ್ಮನ್ ಪೊವೆಲ್ ಹಾಗೂ ಹೋಲ್ಡರ್ ಕೇವಲ 35 ಎಸೆತಗಳಲ್ಲಿ 76 ರನ್​ ಸೇರಿಸಿ ದಾಖಲೆಯ ಮೊತ್ತ ನೀಡಲು ನೆರವಾದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !