ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ದರೋಡೆ ಪ್ರಕರಣದ ತನಿಖೆಯಲ್ಲಿ ಭಾಗಿಯಾದ ಸಿಬ್ಬಂದಿಗಳಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡಿ ಅಭಿನಂದಿಸಲಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ ಕುಮಾರ್ ಸಿಂಗ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಒಂದು ಪ್ರಕರಣ ಭೇದಿಸಿದ ಎಲ್ಲಾ ಸಿಬ್ಬಂದಿಗಳಿಗೆ 5 ಲಕ್ಷ ಬಹುಮಾನ ನೀಡಲಾಗುತ್ತದೆ ಎಂದು ಘೋಷಿಸಿದರು.ಸೋಮವಾರ ಅವರನ್ನು ಅಭಿನಂದಿಸುತ್ತೇವೆ ಎಂದರು.
ಘಟನೆ ನಡೆದ ದಿನ ಹಣ ತೆಗೆದುಕೊಂಡು ಹೋದ ವಾಹನ ಹಿಡಿಯಲಿಕ್ಕೆ ಆಗ್ಲಿಲ್ಲ. ವಾಹನಗಳ ನಂಬರ್ ಪದೇ ಪದೇ ಬದಲಿಸಿದ್ದಾರೆ.ಸಿಸಿಟಿವಿ ಇಲ್ಲದ ಕಡೆಯಲ್ಲಿ ಆರೋಪಿಗಳು ಓಡಾಡಿದ್ದಾರೆ. ವಾಹನವನ್ನು ಸಿಸಿಟಿವಿ ಇಲ್ಲದ ಜಾಗದಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ, ಗೋವಾದಲ್ಲಿ ಆರೋಪಿಗಳನ್ನು ಹುಡುಕಾಟ ನಡೆಸಿದ್ದಾರೆ. ಇನ್ನೂ ಹಣ ರಿಕವರಿ ಆಗಬೇಕು. 200 ಸ್ಟಾಪ್ ಬಳಕೆ ಮಾಡಲಾಗಿದೆ. 30 ಕ್ಕೂ ಹೆಚ್ಚು ಮಂದಿಯನ್ನ ವಿಚಾರಣೆ ಮಾಡಲಾಗಿದೆ. ಮೂವರು ಬಂಧಿಸಲಾಗಿದೆ ಎಂದು ವಿವರಿಸಿದ್ದಾರೆ.

