February 3, 2026
Tuesday, February 3, 2026
spot_img

ರಾಜ್ಯದ ರೈಲ್ವೆ ಯೋಜನೆಗಳಿಗೆ ಬಜೆಟ್ ನಲ್ಲಿ 7,748 ಕೋಟಿ ರೂ. ನಿಗದಿ: ಅಶ್ವಿನಿ ವೈಷ್ಣವ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೇಂದ್ರ ಸಚಿವೆ ನಿರ್ಮಲಾ ಸೀತಾರಮನ್‌ ಬಜೆಟ್‌ ಮಂಡನೆ ಮಾಡಿದ್ದಾರೆ, ಈ ಬಜೆಟ್‌ನಲ್ಲಿ ರಾಜ್ಯದ ರೈಲ್ವೆ ಯೋಜನೆಗಳಿಗೆ 7,748 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಹೇಳಿದ್ದಾರೆ.

ಈ ದೊಡ್ಡ ಮೊತ್ತದಿಂದ ರೈಲ್ವೆ ಸೌಕರ್ಯ ಹೆಚ್ಚಳವಾಗಿದೆ, ಮೂಲಸೌಕರ್ಯ ಅಭಿವೃದ್ಧಿಯಾಗಲಿದೆ. ಸದ್ಯ 52,950 ಕೋಟಿ ರೂ. ಮೌಲ್ಯದ ರೈಲ್ವೆ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Kitchen Tips | ಜೇನುತುಪ್ಪದ ಶುದ್ಧತೆ ಪರೀಕ್ಷಿಸೋದು ಹೇಗೆ? ನೀವು ಬಳಸುತ್ತಿರೋ Honey ಅಸಲಿನಾ? ನಕಲಿನಾ?

ಹೊಸ ಟ್ರ್ಯಾಕ್‌ ನಿರ್ಮಾಣ, ನಿಲ್ದಾಣದ ಪುನರಾಭಿವೃದ್ಧಿ, ಸುರಕ್ಷತಾ ಯೋಜನೆಗಳ ಜಾರಿಗೆ ಮೊತ್ತ ಉಪಯೋಗವಾಗಲಿದೆ.

ಬಜೆಟ್‌ನಲ್ಲಿ ಘೋಷಿಸಲಾದ ಬೆಂಗಳೂರು-ಚೆನ್ನೈ ಮತ್ತು ಬೆಂಗಳೂರು-ಹೈದರಾಬಾದ್ ಬುಲೆಟ್ ಟ್ರೈನ್ ಕಾರಿಡಾರ್‌ಗಳು ಬೆಂಗಳೂರಿನ ಜನರಿಗೆ ದೊಡ್ಡ ಬದಲಾವಣೆಯನ್ನು ತರಲಿವೆ ಎಂದು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !