Saturday, October 18, 2025

ಆರೆಸ್ಸೆಸ್ ನಿಷೇಧ ಸಂವಿಧಾನ ವಿರೋಧಿ: ನ್ಯಾ. ಸಂತೋಷ ಹೆಗಡೆ

ಹೊಸದಿಗಂತ ವರದಿ ಧಾರವಾಡ:

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿದಂತೆ ಎಲ್ಲರಿಗೂ ಸಂಘಟನೆ ಕಟ್ಟುವ ಹಕ್ಕು ಸಂವಿಧಾನವೇ ನೀಡಿದ್ದು, ಇದೀಗ ಸಂಘಟನೆ ನಿಷೇಧ ಮಾಡುವ ಕ್ರಮ ಸಂವಿಧಾನ ವಿರೋಧಿ ನಡೆ ಎಂದು ಮಾಜಿ‌ ಲೋಕಾಯುಕ್ತ, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಘಟನೆ ಮಾಡುವ ಅಧಿಕಾರ, ಹಕ್ಕು ಸಂವಿಧಾನ ಕೊಟ್ಟಿದೆ. ಹೀಗಾಗಿರುವಾಗ ಆರ್.ಎಸ್.ಎಸ್. ಸಂಘಟನೆ ನಿಷೇಧಿಸಲು ಹೊರಟಿರುವುದು ಸಂವಿಧಾನಕ್ಕೆ ವಿರೋಧಿ ಎಂದರು.

ರಾಜ್ಯದಲ್ಲಿ ಆರ್. ಎಸ್.ಎಸ್.‌ ನಿಷೇಧಿಸಲು ಕಾಂಗ್ರೆಸ್ ಪಕ್ಷ ಹೊರಟಿದೆ. ಮತ್ತೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಪಕ್ಷವನ್ನೇ ನಿಷೇಧಿಸುತ್ತಾರೆ. ಆಗ ಅವರ ಆಟ ಶುರುವಾಗುತ್ತದೆ. ಒಟ್ಟಿನಲ್ಲಿ ನಿಷೇಧಿಸುವ ಆಟ ಜೋರಾಗಿದೆ ಎಂದರು.

error: Content is protected !!