Monday, October 20, 2025

ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ನಿರಾಕರಣೆ: ಅನುಮತಿಗಾಗಿ ಹೈಕೋರ್ಟ್ ಮೊರೆ

ಹೊಸದಿಗಂತ ವರದಿ ಕಲಬುರಗಿ:

ರಾಷ್ಟ್ರೀಯ ಸ್ವಯಂಸೇವಕ ಸಂಘ ಕಲಬುರಗಿ ಜಿಲ್ಲೆಯಿಂದ ಇಂದು ನಡೆಯಲಿರುವ ಪಥಸಂಚಲನದ ಅನುಮತಿ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗುತ್ತಿದೆ ಎಂದು ಜಿಲ್ಲಾ ಸಂಘಚಾಲಕ ಅಶೋಕ್ ಪಾಟೀಲ್ ತಿಳಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಬಜಾಜ್ ಕಲ್ಯಾಣ ಮಂಟಪದಿಂದ ನಿಗದಿಯಾದ ಸಮಯದಂತೆ ಪಥಸಂಚಲನಕ್ಕೆ ಅನುಮತಿ ಕೋರಿ ತಾಲೂಕಿನ ತಹಶೀಲ್ದಾರ್ ಗೆ ಕಳೆದ ಅ.15 ಹಾಗೂ 18ಕ್ಕೆ ಮನವಿ ಸಲ್ಲಿಸಲಾಗಿತ್ತು, ಆದರೆ, ಇಲ್ಲಿಯವರೆಗೆ ಅನುಮತಿ ದೊರೆಯದ ಕಾರಣ ನ್ಯಾಯಾಲಯದ ಮೊರೆಗೆ ಹೋಗಲಾಗುತ್ತಿದೆ.

ಭಾನುವಾರ ಬೆಳಿಗ್ಗೆ 9-30ಕ್ಕೆ ಅರ್ಜಿ ವಿಚಾರಣೆ ಕೈಗೊಳ್ಳಲಿರುವ ಹೈಕೋರ್ಟ್, ವಿಚಾರಣೆ ನಡೆಸಲಿದೆ ಎಂದು ತಿಳಿದುಬಂದಿದೆ.

error: Content is protected !!