Friday, September 19, 2025

ರಷ್ಯಾ-ಬೆಲಾರಸ್ ಜಂಟಿ ಸಮರಾಭ್ಯಾಸ: ಭಾರತ, ಬಾಂಗ್ಲಾ, ಇರಾನ್​ ಸಾಥ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಲಾರಸ್ ಜೊತೆ ಸೇರಿ ರಷ್ಯಾ ನಡೆಸುತ್ತಿರುವ ಜಪಾಡ್ (ಪಶ್ಚಿಮ) ಜಂಟಿ ಸಮರಾಭ್ಯಾಸದಲ್ಲಿ 1 ಲಕ್ಷಕ್ಕೂ ಹೆಚ್ಚು ಸೈನಿಕರು ಭಾಗವಹಿಸುತ್ತಿದ್ದಾರೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

ಇದೀಗ ಭಾರತ, ಬಾಂಗ್ಲಾದೇಶ, ಇರಾನ್​, ಬುರ್ಕಿನಾ ಫಾಸೊ, ಕಾಂಗೋ ಮತ್ತು ಮಾಲಿಯ ಯೋಧರೂ ಭಾಗವಹಿಸುತ್ತಿದ್ದಾರೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.

ಇದನ್ನು ಇಲ್ಲಿಯವರೆಗೆ ರಷ್ಯಾ-ಬೆಲಾರಸ್ ಜಂಟಿ ಕವಾಯತು ಎಂದು ಯೋಜಿಸಲಾಗಿತ್ತು. ಇದನ್ನು ಅಮೆರಿಕದ ಸೇನಾ ಪ್ರತಿನಿಧಿಗಳು ವೀಕ್ಷಿಸಿದ್ದರು. ಇದೀಗ, ನ್ಯಾಟೋ ಅಲ್ಲದ ರಾಷ್ಟ್ರಗಳು ಅಭ್ಯಾಸದಲ್ಲಿ ಭಾಗಿಯಾಗಿವೆ.

ಸೇನಾ ಸಮವಸ್ತ್ರದಲ್ಲಿದ್ದ ಪುಟಿನ್​ ಸಮರಾಭ್ಯಾಸದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ‘ನಾವು ಜಪಾಡ್- 2025ರ ಕಾರ್ಯತಂತ್ರದ ಅಭ್ಯಾಸವು ಅಂತಿಮ ಹಂತಕ್ಕೆ ತಲುಪಿದ್ದೇವೆ. ಇದರಲ್ಲಿ 1 ಲಕ್ಷ ಸೈನಿಕರು ಭಾಗವಹಿಸುತ್ತಿದ್ದಾರೆ. ಯೂನಿಯನ್​ ಸ್ಟೇಟ್​ ವಿರುದ್ಧ ಸಂಭಾವ್ಯ ಆಕ್ರಮಣವನ್ನು ಹಿಮ್ಮೆಟ್ಟಿಸುವ ಗುರಿಯನ್ನು ಈ ಕವಾಯತು ಹೊಂದಿವೆ’ ಎಂದು ಹೇಳಿದ್ದಾರೆ.

ಪೋಲೆಂಡ್​ ಪ್ರಧಾನಿ ಡೊನಾಲ್ಡ್ ಟಸ್ಕ್ ಪ್ರಕಾರ, ನಮ್ಮ ದೇಶಧ ಆಯಕಟ್ಟಿನ ಪ್ರಮುಖ ಪ್ರದೇಶವಾದ ಸುವಾಲ್ಕಿ ಕಾರಿಡಾರ್‌ನ ಆಕ್ರಮಣವನ್ನು ಅನುಕರಿಸಲು ಈ ಕವಾಯತುಗಳನ್ನು ವಿನ್ಯಾಸಗೊಳಿಸಲಾಗಿದೆ. ಅಭ್ಯಾಸದ ಅವಧಿಯಲ್ಲಿ ಬೆಲಾರಸ್ ಗಡಿಯ ಬಳಿ ಸುಮಾರು 4 ಲಕ್ಷ ಸೈನಿಕರನ್ನು ನಿಯೋಜಿಸುವುದಾಗಿ ಹೇಳಿದ್ದಾರೆ.

ಜಪಾಡ್ ಸಮರಭ್ಯಾಸದ ವೇಳೆ ಪರಮಾಣು ಶಸ್ತ್ರಾಸ್ತ್ರಗಳನ್ನು ನಿಯೋಜನೆ ಮಾಡುವ ಬಗ್ಗೆಯೂ ಪ್ರಯೋ ನಡೆಸಲಾಗುವುದು ಎಂದು ಬೆಲಾರಸ್​ ಸೈನ್ಯ ತಿಳಿಸಿದೆ.

ಇದನ್ನೂ ಓದಿ