Tuesday, December 2, 2025

ಇಂದು ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ಸಮಂತಾ-ರಾಜ್‌ ನಿದಿಮೋರು ಕಲ್ಯಾಣ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ಸಮಂತಾ ಹಾಗೂ ನಿರ್ದೇಶಕ ರಾಜ್‌ ನಿದಿಮೋರು ಡೇಟಿಂಗ್‌ ರೂಮರ್‌ ನಂತರ ಇದೀಗ ಇವರಿಬ್ಬರ ಮದುವೆ ಇಂದು ನಡೆಯಲಿದೆ ಎನ್ನುವ ಸುದ್ದಿ ಹರಿದಾಡಿದೆ.

ಈ ಬಗ್ಗೆ ಸಮಂತಾ ಅಥವಾ ರಾಜ್‌ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ನಟಿ ಸಮಂತಾ ನಾಗಚೈತನ್ಯರಿಂದ ಡಿವೋರ್ಸ್‌ ಪಡೆದು ಕೆಲ ಕಾಲ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಿದ್ದರು. ಇದೀಗ ರಾಜ್‌ ಜೊತೆ ಸಮಂತಾ ಡೇಟಿಂಗ್‌ ಸುದ್ದಿ ಹರಿದಾಡಿದ ಬೆನ್ನಲ್ಲೇ ಇಬ್ಬರೂ ಸಾಕಷ್ಟು ಬಾರಿ ಒಟ್ಟಿಗೇ ಕಾಣಿಸಿಕೊಂಡಿದ್ದಾರೆ.

ಸದ್ಗುರು ಜಗ್ಗಿ ವಾಸುದೇವ್ ಅವರ ಮೇಲಿನ ಭಕ್ತಿ ಮತ್ತು ಇಶಾ ಫೌಂಡೇಶನ್‌ನೊಂದಿಗಿನ ಅವರ ಒಡನಾಟದಿಂದಾಗಿ ಸಮಂತಾ ಇಂದು ಅಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ ಎಂಬ ವದಂತಿ ಇದೆ.

error: Content is protected !!