March 15, 2026
Sunday, March 15, 2026
spot_img

ಸ್ಯಾಂಡಲ್‌ವುಡ್‌ನ ‘ಎವರ್ ಗ್ರೀನ್ ಹೀರೋಯಿನ್’ ಈಗ ನಂದಿನಿ ಬ್ರ್ಯಾಂಡ್‌ನ ಹೆಮ್ಮೆಯ ರಾಯಭಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದ ಹೆಮ್ಮೆಯ ನಂದಿನಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿ ಸುಧಾರಾಣಿ ಅವರು ಈಗ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.

ಈ ಸುಂದರ ಬಾಂಧವ್ಯದ ಬಗ್ಗೆ ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷರಾದ ಡಿ.ಕೆ. ಸುರೇಶ್ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ.

ಬಮೂಲ್ ಕುಟುಂಬಕ್ಕೆ ಸುಧಾರಾಣಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡಿರುವ ಅವರು, “ನಂದಿನಿ ಬ್ರ್ಯಾಂಡ್ ನಂಬಿಕೆಯ ಮೇಲೆ ನಿರ್ಮಿತವಾಗಿದೆ. ರೈತರ ಮೇಲಿನ ಬದ್ಧತೆ ಮತ್ತು ಶುದ್ಧ-ಗುಣಮಟ್ಟದ ಪೌಷ್ಟಿಕ ಆಹಾರದ ಹರಿಕಾರನಾದ ನಂದಿನಿ, ಸುಧಾರಾಣಿ ಅವರ ಸೇರ್ಪಡೆಯಿಂದ ಇನ್ನಷ್ಟು ಬಲಿಷ್ಠವಾಗಿ ಮನೆಮನಗಳನ್ನು ತಲುಪಲಿದೆ,” ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !