Friday, January 9, 2026

ಮಲೆನಾಡಿನ ಮಂದಿಗೆ ರೈಲ್ವೆ ಇಲಾಖೆಯಿಂದ ಸಂಕ್ರಾಂತಿ ಗಿಫ್ಟ್: 2 ವಿಶೇಷ ರೈಲುಗಳ ವೇಳಾಪಟ್ಟಿ ಪ್ರಕಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಕರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ವಿಪರೀತ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಸುಗಮ ಪ್ರಯಾಣಕ್ಕೆ ಅನುವು ಮಾಡಿಕೊಡಲು ನೈಋತ್ಯ ರೈಲ್ವೆಯು ಬೆಂಗಳೂರಿನ ಯಶವಂತಪುರ ಮತ್ತು ತಾಳಗುಪ್ಪ ನಿಲ್ದಾಣಗಳ ನಡುವೆ ಎರಡು ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.

  1. ಮೊದಲ ವಿಶೇಷ ರೈಲು (ಜೂನ್ 13 & 14):

ರೈಲು ಸಂಖ್ಯೆ 06585: ಜ. 13ರ (ಮಂಗಳವಾರ) ರಾತ್ರಿ 10:45ಕ್ಕೆ ಯಶವಂತಪುರದಿಂದ ಹೊರಟು, ಮರುದಿನ ಬೆಳಗಿನ ಜಾವ 04:45ಕ್ಕೆ ತಾಳಗುಪ್ಪ ತಲುಪಲಿದೆ.

ರೈಲು ಸಂಖ್ಯೆ 06586: ಜ. 14ರ (ಬುಧವಾರ) ಬೆಳಗ್ಗೆ 10:00ಕ್ಕೆ ತಾಳಗುಪ್ಪದಿಂದ ಹೊರಟು, ಸಂಜೆ 05:15ಕ್ಕೆ ಯಶವಂತಪುರ ತಲುಪಲಿದೆ.

ಒಟ್ಟು 22 ಬೋಗಿಗಳಿದ್ದು, ಇದರಲ್ಲಿ ಪ್ರಥಮ ದರ್ಜೆ ಎಸಿ (1), ಎಸಿ ಟು ಟೈರ್ (2), ಎಸಿ ತ್ರೀ-ಟೈರ್ (6), ಸ್ಲೀಪರ್ ಕ್ಲಾಸ್ (8), ಮತ್ತು ಜನರಲ್ ಸೆಕೆಂಡ್ ಕ್ಲಾಸ್ (3) ಬೋಗಿಗಳಿರಲಿವೆ.

  1. ಎರಡನೇ ವಿಶೇಷ ರೈಲು (ಜೂನ್ 23 & 24):

ರೈಲು ಸಂಖ್ಯೆ 06587: ಜ. 23ರ (ಶುಕ್ರವಾರ) ರಾತ್ರಿ 10:45ಕ್ಕೆ ಯಶವಂತಪುರದಿಂದ ಹೊರಟು, ಮರುದಿನ ಬೆಳಗಿನ ಜಾವ 04:45ಕ್ಕೆ ತಾಳಗುಪ್ಪ ತಲುಪಲಿದೆ.

ರೈಲು ಸಂಖ್ಯೆ 06588: ಜ. 24ರ (ಶನಿವಾರ) ಬೆಳಗ್ಗೆ 10:00ಕ್ಕೆ ತಾಳಗುಪ್ಪದಿಂದ ಹೊರಟು, ಅಂದೇ ಸಂಜೆ 05:15ಕ್ಕೆ ಯಶವಂತಪುರ ತಲುಪಲಿದೆ.

ಒಟ್ಟು 20 ಬೋಗಿಗಳಿದ್ದು, ಇದರಲ್ಲಿ ಪ್ರಥಮ ದರ್ಜೆ ಕಮ್ ಎಸಿ ಟು ಟೈರ್ (1), ಎಸಿ ತ್ರೀ-ಟೈರ್ (2), ಸ್ಲೀಪರ್ ಕ್ಲಾಸ್ (10), ಮತ್ತು ಜನರಲ್ ಸೆಕೆಂಡ್ ಕ್ಲಾಸ್ (5) ಬೋಗಿಗಳು ಲಭ್ಯವಿವೆ.

ಈ ವಿಶೇಷ ರೈಲುಗಳು ಎರಡೂ ದಿಕ್ಕುಗಳಲ್ಲಿ ಸಂಚರಿಸುವಾಗ ಈ ಕೆಳಗಿನ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿವೆ:

ತುಮಕೂರು
ತಿಪಟೂರು
ಅರಸೀಕೆರೆ
ಬೀರೂರು
ತರೀಕೆರೆ
ಭದ್ರಾವತಿ
ಶಿವಮೊಗ್ಗ ಟೌನ್
ಆನಂದಪುರಂ ಮತ್ತು ಸಾಗರ ಜಂಬಗಾರು

ಹಬ್ಬದ ಪ್ರಯಾಣಕ್ಕಾಗಿ ಸಾರ್ವಜನಿಕರು ಈ ವಿಶೇಷ ರೈಲು ಸೇವೆಯ ಲಾಭವನ್ನು ಪಡೆದುಕೊಳ್ಳಬೇಕೆಂದು ರೈಲ್ವೆ ಇಲಾಖೆ ಕೋರಿದೆ.

error: Content is protected !!