Tuesday, December 16, 2025

ಶಾಲೆಗೆ ಖಾಯಂ ಶಿಕ್ಷಕರು ಬೇಕು: ಮಕ್ಕಳೊಂದಿಗೆ ಪ್ರತಿಭಟನೆಗಿಳಿದ ಪೋಷಕರು

ಹೊಸದಿಗಂತ ವರದಿ ಮುಂಡಗೋಡ:

ಶಾಲೆಗೆ ಖಾಯಂ ಶಿಕ್ಷಕರ ನೇಮಕ ಮಾಡುವಂತೆ ಒತ್ತಾಯಿಸಿ ಮಕ್ಕಳೊಂದಿಗೆ ಪಾಲಕರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಉಗ್ಗಿನಕೇರಿ ಗ್ರಾಮದಲ್ಲಿ ಸೋಮವಾರ ಜರುಗಿತು.

ಉಗ್ಗಿನಕೇರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೆ ತರಗತಿಯಿಂದ ಎಂಟನೆ ತರಗತಿವರೆಗು ಕನ್ನಡ ಮಾಧ್ಯಮ ಹಾಗೂ ಒಂದನೆ ತರಗತಿಯಿಂದ ಐದನೆ ತರಗತಿವರೆಗೆ ಇಂಗ್ಲೀಷ ಮಾಧ್ಯಮ ತರಗತಿಗಳಿದ್ದು ಇಲ್ಲಿ ಒಟ್ಟು 280 ಮಕ್ಕಳ ಸಂಖ್ಯೆ ಇದೆ. ಇಲ್ಲಿ ಮುಖ್ಯೋಪಾಧ್ಯಾಯರು ಸೇರಿ ಹದಿನಾಲ್ಕು ಜನರ ಶಿಕ್ಷರ ಹುದ್ದೆಗಳಿವೆ. ಆದರೆ ಇಲ್ಲಿ ಕೇವಲ ಮೂರು ಶಿಕ್ಷಕರು ಮಾತ್ರ ಖಾಯಂ ಶಿಕ್ಷಕರಿದ್ದು ನಾಲ್ಕು ಜನರು ಅತಿಥಿ ಶಿಕ್ಷಕರಿದ್ದಾರೆ. ಅದರಲ್ಲೆ ಅತಿಥಿ ಶಿಕ್ಷರು ಎರಡು ದಿನ ಬಂದರೆ ಎರಡು ದಿನ ರಜೆ ಹಾಕುತ್ತಾರೆ. ಇರುವ ಮೂರು ಜನ ಖಾಯಂ ಶಿಕ್ಷಕರಲ್ಲಿ ಒಬ್ಬರು ಮುಖ್ಯೋಪಾಧ್ಯಾಯರ ಕೆಲಸ ನಿರ್ವಹಿಸುತ್ತಾರೆ. ಇದರಿಂದ ನಮ್ಮ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ.

ಇದೆ ರೀತಿ ಮುಂದುವರೆದರೆ ಶಾಲೆಯಲ್ಲಿರುವ 280 ಮಕ್ಕಳಲ್ಲಿ ಕೆವಲ 80 ಮಕ್ಕಳು ಇಲ್ಲಿ ಉಳಿಯುವುದಿಲ್ಲ ಹಲವು ವರ್ಷಗಳಿಂದ ಖಾಯಂ ಶಿಕ್ಷಕರನ್ನು ನೇಮಿಸುವಂತೆ ಮೇಲಧಿಕಾರಿಗಳ ಗಮನಕ್ಕೆ ತಂದರು ಯಾವುದೆ ಪ್ರಯೋಜನವಾಗುತ್ತಿಲ್ಲ ಶಿಕ್ಷಕರ ನೇಮಕ ಆಗುವರೆಗೂ ನಮ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹೀಡಿದ ಮಕ್ಕಳು ಹಾಗೂ ಗ್ರಾಮಸ್ಥರು ಉರಿ ಬಿಸಿಲಿನಲ್ಲೆ ಶಾಲೆ ಮುಂದೆ ನಿಂತು ಪ್ರತಿಭಟನೆ ನಡೆಸಿದರು.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ತಾಲೂಕು ಶಿಕ್ಷಣಾಧಿಕಾರಿ ಸುಮಾ ಜೀ ಅವರು ಸ್ಥಳಕ್ಕೆ ಆಗಮಿಸಿ ಮಕ್ಕಳ ಪಾಲಕರ ಹಾಗೂ ಗ್ರಾಮಸ್ಥರ ಮನ ವಲಿಸಲು ಮುಂದಾದರು ಆದರು ಬಗ್ಗದ ಪ್ರತಿಭಟನಾಕಾರರು ಎಲ್ಲ ತರಗತಿಗಳಿಗೆ ಖಾಯಂ ಶಿಕ್ಷಕರ ನೇಮಕ ಮಾಡದಿದ್ದರೆ ನಾವು ಪ್ರತಿಭಟನೆ ನಿಲ್ಲಿಸಲ್ಲ ಎಂದು ಪಟ್ಟು ಹಿಡಿದರು. ನಂತರ ಎಸ್ ಡಿ ಎಮ್ ಸಿ ಅಧ್ಯಕ್ಷ , ಉಪಾಧ್ಯಕ್ಷ, ಸದಸ್ಯರನ್ನು ಹಾಗೂ ಗ್ರಾಮಸ್ಥರನ್ನು ಕರೆಯಿಸಿ ಈ ರೀತಿ ಮಕ್ಕಳನ್ನು ಪ್ರತಿಭಟನೆ ಮಾಡಿಸುವುದರಿಂದ ಯಾವ ಸಮಸ್ಯೆ ಬಗೆಹರಿಯುವುದಿಲ್ಲ ನಿಮ್ಮ ಸಮಸ್ಯೆಯನ್ನು ಬಗೆ ಹರಿಸೋಣ ನಾಲ್ಕೂ ಜನ ಖಾಯಂ ಶಿಕ್ಷಕರು ಹಾಗೂ ಐದು ಜನ ಅಥಿತಿ ಶಿಕ್ಕರನ್ನು ನೇಮಿಸಿ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗದಂತೆ ನೋಡಿಕೊಳಲಾಗುವುದು ಖಾಯಂ ಶಿಕ್ಷಕರ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಶಿಕ್ಷಕರ ಕೊರತೆ ಸರಿಪಡಿಸೋಣ ಎಂದು ಹೇಳಿದಾಗ ಅದಕ್ಕೆ ಒಪ್ಪದ ಪ್ರತಿಭಟನಾಕಾರರು ಪ್ರತಿಭಟನೆ ನಿಲ್ಲಿಸಿ ಶಿಕ್ಷರ ನೇಮಕ ಮಾಡುವಂತೆ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು ಶಿಕ್ಷಣ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.

error: Content is protected !!