ಹೊಸದಿಗಂತ ಡಿಜಿಟಲ್ ಡೆಸ್ಕ್:
ನೇರವಾಗಿ ನೋಂದಾಯಿತ ಹಣಕಾಸು ಸಲಹೆಗಾರರಾಗದಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಷೇರು ಹೂಡಿಕೆ ಸಲಹೆ ನೀಡುತ್ತಿರುವ “ಫಿನ್‌ಫ್ಲುಯೆನ್ಸರ್”ಗಳ ವಿರುದ್ಧ ಸೆಬಿ ತೀವ್ರ ಕ್ರಮ ಕೈಗೊಂಡಿದೆ.
ಅಕ್ಟಿವಿಟಿ ಪರಿಶೀಲನೆ ವೇಳೆ ಸುಮಾರು 1 ಲಕ್ಷ ವೀಡಿಯೊಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಸೆಬಿ ಅಧ್ಯಕ್ಷ ತುಹಿನ್ ಕಾಂತಾ ಪಾಂಡೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸೆಬಿ “ಸುದರ್ಶನ” ಎಂಬ AI ಆಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡು, ಅನಧಿಕೃತ ಹೂಡಿಕೆ ಸಲಹೆಗಳನ್ನು ಪತ್ತೆ ಮಾಡುತ್ತಿದೆ.
ಇದನ್ನೂ ಓದಿ: FOOD | ಇಂದೇ ಟ್ರೈ ಮಾಡಿ ನೋಡಿ ರುಚಿಯಾದ ಸಿಂಪಲ್ ಸ್ವೀಟ್ ಕಾರ್ನ್ ಸೂಪ್
ಅಧಿಕಾರಿಗಳು ಎಸ್ಎಂಇ ಐಪಿಒಗಳಲ್ಲಿ ಕಂಡುಬರುವ ಅಸ್ಥಿರತೆ, ಜಾಹೀರಾತು ನಿಯಮಗಳ ಪುನರ್‌ರಚನೆ ಮತ್ತು ಪ್ರಾಸ್ಪೆಕ್ಟಸ್‌ನಲ್ಲಿ ಹೂಡಿಕೆದಾರರಿಗೆ ಮುಖ್ಯ ಮಾಹಿತಿಯ ಸುಲಭ ಲಭ್ಯತೆ ಕುರಿತು ಚರ್ಚಿಸಿದ್ದಾರೆ. ಹೊಸ ನಿಯಮಗಳ ಅಡಿಯಲ್ಲಿ, ಐಪಿಒ ಜಾಹೀರಾತುಗಳಲ್ಲಿ ಅದರ ಗಾತ್ರ ಮತ್ತು ವರ್ಗ ಸ್ಪಷ್ಟವಾಗಿ ಉಲ್ಲೇಖ ಮಾಡಬೇಕಾಗಿದೆ. ಜೊತೆಗೆ, ಹೂಡಿಕೆದಾರರ ಅನುಕೂಲಕ್ಕಾಗಿ ಸಂಕ್ಷಿಪ್ತ ಪ್ರಾಸ್ಪೆಕ್ಟಸ್ ಪರಿಚಯಿಸಲಾಗುವುದು ಎನ್ನಲಾಗಿದೆ.

