ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮಹಾಘಟಬಂಧನ್ ನಡೆಸುತ್ತಿರುವ ಮತದಾರರ ಹಕ್ಕುಗಳ ಯಾತ್ರೆ ಎಂಟನೇ ದಿನವಾದ ಇಂದು ಪೂರ್ಣಿಯಾದ ಕತಿಹಾರ್ ತಿರುವಿನಿಂದ ಪ್ರಾರಂಭವಾಯಿತು. ಈ ವೇಳೆ ರಾಹುಲ್ ಗಾಂಧಿಯವರ ಭದ್ರತೆಯಲ್ಲಿ ಲೋಪ ಕಂಡುಬಂದಿದೆ.
ಯುವಕನೊರ್ವ ಇದ್ದಕ್ಕಿದ್ದಂತೆ ಭದ್ರತಾ ಕವಚವನ್ನು ದಾಟಿ ರಾಹುಲ್ ಗಾಂಧಿ ಬಳಿ ಬಂದು ಅಪ್ಪಿಕೊಂಡು ಕೆನ್ನೆಗೆ ಮುತ್ತು ನೀಡಿದ್ದಾನೆ. ನಂತರ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ತಕ್ಷಣ ಯುವಕನನ್ನು ಹಿಡಿದು, ಆತನ ಕಪಾಳಕ್ಕೆ ಬಾರಿಸಿ ಅಲ್ಲಿಂದ ಕರೆದೊಯ್ದಿದ್ದಾರೆ.
ಯಾತ್ರೆಯನ್ನು ಮುನ್ನಡೆಸುತ್ತಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ಪ್ರಯಾಣದ ಸಮಯದಲ್ಲಿ ಬುಲೆಟ್ ಓಡಿಸಿದರು. ಬಿಹಾರ (Bihar) ಕಾಂಗ್ರೆಸ್ (Congress) ಅಧ್ಯಕ್ಷ ರಾಜೇಶ್ ರಾಮ್ ಬೈಕ್ ನ ಹಿಂಬದಿ ಕುಳಿತಿದ್ದರು. ಈ ಸಮಯದಲ್ಲಿ, ಹೆಚ್ಚಿನ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ಬೈಕ್‌ಗಳಲ್ಲಿ ಸವಾರಿ ಮಾಡಿದರು. ಈ ವೇಳೆ ಯುವಕನೋರ್ವ ಅಚಾನಕ್ ಆಗಿ ರಸ್ತೆ ಮಧ್ಯೆ ಬಂದು ರಾಹುಲ್ ಗಾಂಧಿಯನ್ನು ಅಪ್ಪಿಕೊಳ್ಳಲು ಯತ್ನಿಸಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.