ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಜಾನುವಾರು ಕಳ್ಳ ಸಾಗಣೆ ಪ್ರಯತ್ನವನ್ನು ವಿಫಲಗೊಳಿಸಲು ಪ್ರಯತ್ನಿಸುವ ವೇಳೆ ಗಡಿ ಭದ್ರತಾ ಪಡೆಯ (BSF) ಕಾನ್‌ಸ್ಟೇಬಲ್ ಬಾಂಗ್ಲಾದೇಶಕ್ಕೆ ದಾಟಿದ್ದದ್ದು, ಬಳಿಕ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ.
ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯ ಗಡಿಯಲ್ಲಿ ಬಿಎಸ್‌ಎಫ್‌ನ 174ನೇ ಬೆಟಾಲಿಯನ್ ಕಾನ್‌ಸ್ಟೇಬಲ್ ವೇದ್ ಪ್ರಕಾಶ್ ಭಾನುವಾರ ಮುಂಜಾನೆ ದನ ಕಳ್ಳ ಸಾಗಣೆದಾರರ ವಿರುದ್ಧದ ಕಾರ್ಯಾಚರಣೆಯ ಸಮಯದಲ್ಲಿ ಅಂತಾರಾಷ್ಟ್ರೀಯ ಗಡಿಯನ್ನು ದಾಟಿದ್ದರು. ಮಂಜಿನಿಂದ ಏನೂ ಕಾಣಿಸದೇ ಇದ್ದುದರಿಂದ ತಪ್ಪಾಗಿ ಗಡಿ ದಾಟುವಂತಾಯಿತು ಎಂದು ಹಿರಿಯ ಬಿಎಸ್‌ಎಫ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ವೇಳೆ ಕಾನ್‌ಸ್ಟೇಬಲ್ ನಿಯಮಿತ ಗಸ್ತು ಮತ್ತು ಕಾರ್ಯಾಚರಣೆಯಲ್ಲಿದ್ದರು. ಈ ವೇಳೆ ಶಂಕಿತ ಕಳ್ಳ ಸಾಗಣೆದಾರರನ್ನು ಬೆನ್ನಟ್ಟುವಾಗ ತನ್ನ ತಂಡದಿಂದ ಬೇರ್ಪಟ್ಟರು. ಭಾರಿ ಮಂಜಿನಿಂದಾಗಿ, ಕಾನ್‌ಸ್ಟೇಬಲ್ ಅಜಾಗರೂಕತೆಯಿಂದ ಬಾಂಗ್ಲಾದೇಶದ ಪ್ರವೇಶಿಸಿದರು. ಎರಡೂ ಕಡೆಯ ಪಡೆಗಳು ತಕ್ಷಣವೇ ಸಂಪರ್ಕವನ್ನು ಸ್ಥಾಪಿಸಿದವು. ಬಾರ್ಡರ್ ಗಾರ್ಡ್ ಬಾಂಗ್ಲಾದೇಶ (ಬಿಜಿಬಿ) ಮಧ್ಯಾಹ್ನದ ವೇಳೆಗೆ ಅವರನ್ನು ಬಿಎಸ್‌ಎಫ್‌ಗೆ ಹಸ್ತಾಂತರಿಸಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯ ನಂತರ, ಕೂಚ್ ಬೆಹಾರ್ ಜಿಲ್ಲೆಯ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಬಿಎಸ್‌ಎಫ್ ಭದ್ರತೆಯನ್ನು ಹೆಚ್ಚಿಸಿದೆ. ಗಡಿಯಾಚೆಗಿನ ಅಪರಾಧಗಳನ್ನು ನಿಗ್ರಹಿಸಲು ದುರ್ಬಲ ಪ್ರದೇಶಗಳಲ್ಲಿ ಹೆಚ್ಚಿದ ಸಂಘಟಿತ ಗಸ್ತು, ಕಣ್ಗಾವಲು ಮತ್ತು ಹೆಚ್ಚಿನ ನಿಯೋಜನೆ ಸೇರಿದಂತೆ ಹೆಚ್ಚುವರಿ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

