Monday, October 20, 2025

ಸೇಡಂನಲ್ಲಿ ತಹಶೀಲ್ದಾರ್ ಆದೇಶಕ್ಕೆ ಸೆಡ್ಡು: ಸ್ವಯಂಸೇವಕರಿಂದ ಪಥಸಂಚಲನ ಯಶಸ್ವಿ

ಹೊಸ ದಿಗಂತ ವರದಿ,ಕಲಬುರಗಿ:

ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರ ತವರೂರು ಸೇಡಂನಲ್ಲಿ ಆರೆಸ್ಸೆಸ್ ಪಥಸಂಚಲನಕ್ಕೆ ಅನುಮತಿ ನೀಡಿ,ಕೊನೆ ಘಳಿಗೆ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ, ತಹಶೀಲ್ದಾರರ ಆದೇಶಕ್ಕೆ ಸೆಡ್ಡು ಹೊಡೆದು ಗಣವೇಷಧಾರಿ ಸ್ವಯಂಸೇವಕರಿಂದ ಯಶಸ್ವಿಯಾಗಿ ಪಥಸಂಚಲನ ಸಂಪನ್ನಗೊಂಡಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಹಾಗೂ ವಿಜಯದಶಮಿಯ ಉತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಗಣವೇಷಧಾರಿ ಸ್ವಯಂಸೇವಕರ ಆಕರ್ಷಕ ಪಥಸಂಚಲನವು ಜಿಲ್ಲೆಯ ಸೇಡಂ ತಾಲೂಕಿನ ಮಾತೃ ಛಾಯಾ ಆವರಣದಿಂದ ಹೊರಡುವಾಗ, ಏಕಾಏಕಿ ತಮಗೆ ಅನುಮತಿ ಇಲ್ಲ ಎಂದು ಸ್ಥಳೀಯ ಆಡಳಿತ ಹೇಳಿ ತಡೆಯಲು ಯತ್ನಿಸಿದ್ದು,ಮುಂಚೇ ಅನುಮತಿ ನೀಡಿ ಕೊನೆ ಘಳಿಗೆ ನಿಷೇಧಾಜ್ಞೆ ಹೇರಿದರೆ ಹೇಗೆ ಎಂದು ಸ್ವಯಂಸೇವಕರು ಪ್ರಶ್ನಿಸಿದರು.

ಈ ವೇಳೆ ನೂರಾರು ಸ್ವಯಂಸೇವಕರನ್ನು ಬಂಧಿಸಿದರು, ಸಾವಿರಾರು ಸಂಖ್ಯೆಯಲ್ಲಿದ್ದ ಸ್ವಯಂಸೇವಕರನ್ನು ತಡೆ ಹಿಡಿಯಲು ಸ್ಥಳೀಯ ಆಡಳತದಿಂದಾಗಲಿ ಅಥವಾ ಪೋಲಿಸರಿಂದಾಗಲಿ ಸಾಧ್ಯವಾಗಲಿಲ್ಲ.ಸುಮಾರು ೧೪೦೦ಕ್ಕೂ ಅಧಿಕ ಸ್ವಯಂಸೇವಕರು ಪೋಲಿಸರು ತಡೆಯೊಡ್ಡಿದರು, ಪದಸಂಚಲನವನ್ನು ಯಶಸ್ವಿಯಾಗಿ ಮುಗಿಸಿದರು.

error: Content is protected !!