Wednesday, January 28, 2026
Wednesday, January 28, 2026
spot_img

ಸೀಫರ್ಟ್​, ಕಾನ್ವೆ ಭರ್ಜರಿ ಬ್ಯಾಟಿಂಗ್: ಭಾರತಕ್ಕೆ ಬಿಗ್ ಟಾರ್ಗೆಟ್ ನೀಡಿದ ಕಿವೀಸ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ನಾಲ್ಕನೇ T20 ಪಂದ್ಯದಲ್ಲಿ ಕಿವೀಸ್ ಉತ್ತಮ ಪ್ರದರ್ಶನ ತೋರಿದೆ. 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 215 ರನ್​ಗಳ ಬೃಹತ್ ಮೊತ್ತ ದಾಖಲಿಸಿದೆ.

ಈಗಾಗಲೆ ಸರಣಿ ಕಳೆದುಕೊಂಡಿರುವ ಕಿವೀಸ್ ಗೌರವ ಉಳಿಸಿಕೊಳ್ಳಲು ಈ ಪಂದ್ಯದಲ್ಲಿ ಸಿಡಿಲಬ್ಬರ ಬ್ಯಾಟಿಂಗ್ ಮಾಡಿತು. ಸೀಫರ್ಟ್ 62 ರನ್​ಗಳಿಸಿದರೆ, ಡಿವೋನ್ ಕಾನ್ವೆ 44 ರನ್​ಗಳಿಸಿದರು. ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳು ಭಾರತದ ಬೌಲರ್​ಗಳನ್ನ ಸಮರ್ಥವಾಗಿ ಎದುರಿಸಲಿ ವಿಫಲರಾದರು.

3ನೇ ಕ್ರಮಾಂಕದಲ್ಲಿ ಬಂದ ರಚಿನ್ ರವೀಂದ್ರ ಕೇವಲ 2 ರನ್​ಗಳಿಸಿ ಜಸ್ಪ್ರೀತ್ ಬುಮ್ರಾ ಬೌಲಿಂಗ್​​ನಲ್ಲಿ ಅವರಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇನ್ನು ಸ್ಫೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸುತ್ತಿದ್ದ ಸೀಪರ್ಟ್ ಕೂಡ 13ನೇ ಓವರ್​​ನಲ್ಲಿ ಅರ್ಷದೀಪ್ ಸಿಂಗ್ ಬೌಲಿಂಗ್​​ನಲ್ಲಿ ರಿಂಕು ಸಿಂಗ್​ಗೆ ಕ್ಯಾಚ್ ನೀಡಿದರು. ಸೀಫರ್ಟ್ 36 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್​ಗಳ ಸಹಿತ 62 ರನ್​ಗಳಿಸಿದರು.

ಗ್ಲೆನ್ ಫಿಲಿಪ್ಸ್ 16 ಎಸೆತ್ಗಳಲ್ಲಿ 24, ಮಾರ್ಕ್ ಚಾಪ್ಮನ್ 8 ಎಸೆತಗಳಲ್ಲಿ 9 ರನ್, ಮಿಚೆಲ್ ಸ್ಯಾಂಟ್ನರ್ 6 ಎಸೆತಗಳಲ್ಲಿ ತಲಾ 1 ಬೌಂಡರಿ, ಸಿಕ್ಸರ್​ ಸಹಿತ 11 ರನ್, ಜಾಕರಿ ಫೋಕ್ಸ್ 6 ಎಸೆತಗಳಲ್ಲಿ 13 ರನ್​ಗಿಳಿಸಿ ಔಟ್ ಆದರು. ಕೊನೆಯ ಎರಡು ಓವರ್​ಗಳಲ್ಲಿ ಅಬ್ಬರಿಸಿದ ಡ್ಯಾರಿಲ್ ಮಿಚೆಲ್ 18 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್​ಗಳ ಸಹಿತ ಅಜೇಯ 39 ರನ್​ಗಳಿಸಿ ತಂಡದ ಮೊತ್ತವನ್ನ 200ರ ಗಡಿದಾಟಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !