Thursday, January 1, 2026

ಡ್ರೋನ್ ಮೂಲಕ ಮದ್ದು-ಗುಂಡು, ಸ್ಫೋಟಕಗಳ ರವಾನೆ: ಭಾರತೀಯ ಸೇನೆಯಿಂದ ಪಾಕ್ ಸಂಚು ವಿಫಲ!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಪಾಕಿಸ್ತಾನದ ಡ್ರೋನ್ ಗಡಿ ದಾಟಿ ಪೂಂಚ್ ಜಿಲ್ಲೆಯಲ್ಲಿ ಸ್ಫೋಟಕ, ಮದ್ದುಗುಂಡು ಮತ್ತು ಮಾದಕವಸ್ತುಗಳನ್ನು ಹಾಕಿರುವುದನ್ನು ಪತ್ತೆಮಾಡಿದ್ದು, ಡ್ರೋನ್ ಬಳಸಿ ಸುಧಾರಿತ ಸ್ಫೋಟಕ ಸಾಧನ (IED) ಮತ್ತು ಮದ್ದುಗುಂಡುಗಳನ್ನು ಕಳ್ಳಸಾಗಣೆ ಮಾಡುವ ಪಾಕಿಸ್ತಾನದ ಕುತಂತ್ರವನ್ನು ವಿಫಲಗೊಳಿಸಿವೆ.

ನಿಯಂತ್ರಣ ರೇಖೆಯ (LOC) ಖಾರಿ ಕರ್ಮಾರ ಪ್ರದೇಶದಲ್ಲಿ ಪಾಕ್ ಡ್ರೋನ್ ಕಂಡುಬಂದಿದೆ.

ಪಾಕ್ ಡ್ರೋನ್‍ನಿಂದ ಬೀಳಿಸಲಾದ ಸ್ಫೋಟಕಗಳು, ಮದ್ದುಗುಂಡುಗಳು ನಿಯಂತ್ರಣ ರೇಖೆಯ ಬಳಿ ಪತ್ತೆಯಾಗಿವೆ. ಭದ್ರತಾ ಪಡೆಯು ಆ ಪ್ರದೇಶವನ್ನು ಸಂಪೂರ್ಣವಾಗಿ ಸುತ್ತುವರಿದರು. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಕಾರ್ಯಾಚರಣೆ ಆರಂಭಿಸಲಾಯಿತು. ಈ ಪ್ರದೇಶವನ್ನು ಅಸ್ಥಿರಗೊಳಿಸಲು ಪಾಕಿಸ್ತಾನದ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ. ಈ ಮೂಲಕ ಭಾರತದ ಭದ್ರತಾ ಪಡೆಗಳು ಎಚ್ಚರಿಕೆ ವಹಿಸಿವೆ ಎಂದು ಅದಿಕಾರಿಗಳು ತಿಳಿಸಿದ್ದಾರೆ.

ಚಳಿಗಾಲದ ತಿಂಗಳಲ್ಲಿ ಮಂಜು ಆವೃತವಾಗಿರುವ ಹಿನ್ನೆಲೆಯಲ್ಲಿ ಗಲಭೆ ಸೃಷ್ಟಿಸಲು ಭಯೋತ್ಪಾದಕರು ಭಾರತದ ಭೂ ಪ್ರದೇಶಕ್ಕೆ ನುಸುಳಲು ಸಜ್ಜಾಗುತ್ತಿದ್ದಾರೆ ಎಂದು ಗುಪ್ತಚರ ಮಾಹಿತಿ ಎಚ್ಚರಿಸಿದೆ. ಹೀಗಾಗಿ ಭದ್ರತಾ ಪಡೆಗಳನ್ನು ಹೈಅಲರ್ಟ್‌ನಲ್ಲಿ ಇರಿಸಲಾಗಿದ್ದು, ಉಗ್ರರ ಯೋಜನೆಗಳನ್ನು ವಿಫಲಗೊಳಿಸಲು ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿಯನ್ನು ಕಾಪಾಡಲು ಸಿದ್ಧವಾಗಿದೆ.

error: Content is protected !!