Tuesday, October 28, 2025

ಎರಡು ದಿನ ರಾಜ್ಯದ ಐದೂ ಎಸ್ಕಾಂಗಳ ಸೇವೆಗಳಲ್ಲಿ ವ್ಯತ್ಯಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದ ಐದೂ ಎಸ್ಕಾಂಗಳ ಸೇವೆಗಳಲ್ಲಿ ಅಕ್ಟೋಬರ್ 24-25ರಂದು ವ್ಯತ್ಯಯ ಉಂಟಾಗಲಿದೆ.

ತುರ್ತು ನಿರ್ವಹಣಾ ಕಾರ್ಯಗಳಿಂದಾಗಿ ಅ.24 ರಂದು ರಾತ್ರಿ 8 ಗಂಟೆಯಿಂದ ಅ.25 ರ ಮಧ್ಯಾಹ್ನ 1 ಗಂಟೆವರೆಗೆ ಐದು ಎಸ್ಕಾಂಗಳ ನಗರ ವ್ಯಾಪ್ತಿಯ ಗ್ರಾಹಕರಿಗೆ (ಆರ್‌ಎಪಿಡಿಆರ್‌ಪಿ) ವಿದ್ಯುತ್‌ ಬಿಲ್‌ ಪಾವತಿ, ಹೆಸರು ಬದಲಾವಣೆ, ಮೀಟರ್‌ ಬದಲಾವಣೆ, ಹೊಸ ಸಂಪರ್ಕಕ್ಕೆ ಅರ್ಜಿ ಸಲ್ಲಿಕೆ ಸೇರಿದಂತೆ ಯಾವುದೇ ಆನ್‌ಲೈನ್‌ ಸೇವೆ ಲಭ್ಯವಿರುವುದಿಲ್ಲ.

ಜತೆಗೆ ವಿದ್ಯುತ್ ಬಿಲ್ ಪಾವತಿಗಾಗಿ ಬಳಸುವ ಬೆಸ್ಕಾಂ ಮಿತ್ರ ಆ್ಯಪ್‌, ಬೆಂಗಳೂರು ಒನ್, ಕರ್ನಾಟಕ ಒನ್ ಸೇರಿ ಥರ್ಡ್ ಪಾರ್ಟಿ ಪಾವತಿ ವಿಧಾನಗಳಲ್ಲೂ ಈ ಸೇವೆ ಅಲಭ್ಯ ಎಂದು ಇಂಧನ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ), ಹುಬ್ಬಳ್ಳಿಯ ಹೆಸ್ಕಾಂ, ಕಲಬುರಗಿಯ ಜೆಸ್ಕಾಂ, ಮೈಸೂರಿನ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ (ಸೆಸ್ಕ್), ಮಂಗಳೂರಿನ ಮೆಸ್ಕಾಂ ಸೇರಿ ಐದು ಕಂಪೆನಿಗಳ ವ್ಯಾಪ್ತಿಯಲ್ಲಿ ಆನ್‌ಲೈನ್‌ ಸೇವೆ ಲಭ್ಯವಿರುವುದಿಲ್ಲ. ಅನಾನುಕೂಲತೆಗಾಗಿ ಜನರು ಸಹಕರಿಸಬೇಕೆಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!