Monday, October 27, 2025

ಲೈಂಗಿಕ ದೌರ್ಜನ್ಯ: ಸಿಂಗಾಪುರದಲ್ಲಿ ಭಾರತೀಯ ಮೂಲದ ನರ್ಸ್ ಗೆ ಜೈಲು ಶಿಕ್ಷೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಂಗಾಪುರದ ರಫೆಲ್ಸ್ ಪ್ರೀಮಿಯಂ ಆಸ್ಪತ್ರೆಯಲ್ಲಿ ಸಂದರ್ಶಕ ವ್ಯಕ್ತಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಭಾರತೀಯ ನರ್ಸ್ ಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

ಸಿಂಗಾಪುರ ಪ್ರೀಮಿಯಂ ಆಸ್ಪತ್ರೆಯಲ್ಲಿ ಎಲಿಪೆ ಶಿವಾ ನಾಗು ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ. ಈ ವೇಳೆ ಆತ ಆಸ್ಪತ್ರೆಗೆ ಬಂದಿದ್ದ ಸಂದರ್ಶಕನೊಬ್ಬನಿಗೆ ಲೈಂಗಿಕ ಕಿರುಕುಳ ಎಸಗಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದನು. ಬಳಿಕ ಎಲಿಪೆ ಶಿವಾ ನಾಗು ತಪ್ಪೊಪ್ಪಿಕೊಂಡ ಬಳಿಕ ಆತನಿಗೆ ಒಂದು ವರ್ಷ ಮತ್ತು ಎರಡು ತಿಂಗಳ ಜೈಲು ಶಿಕ್ಷೆ ಹಾಗೂ ಎರಡು ಲಾಠಿ ಪ್ರಹಾರ ಶಿಕ್ಷೆಯನ್ನು ವಿಧಿಸಲಾಗಿದೆ.

ಸಂತ್ರಸ್ತನನ್ನು ಸೋಂಕು ರಹಿತಗೊಳಿಸುವುದಾಗಿ ಹೇಳಿ ಎಲಿಪೆ ಶಿವಾ ನಾಗು ಆಸ್ಪತ್ರೆಯಲ್ಲಿ ಪುರುಷ ಸಂದರ್ಶಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಎಲಿಪೆ ಶಿವಾ ನಾಗು ವಿರುದ್ಧ ಆರೋಪ ಕೇಳಿ ಬಂದ ಬಳಿಕ ಆತನನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ. ಈ ಘಟನೆಯಿಂದ ಸಂತ್ರಸ್ತನಿಗೆ ಹಿಂದಿನ ನೆನಪುಗಳು ಕಾಡುವಂತೆ ಮಾಡಿದೆ. ಸಂತ್ರಸ್ತನ ವಯಸ್ಸು ಸೇರಿದಂತೆ ವಿವರಗಳನ್ನು ನ್ಯಾಯಾಲಯದ ದಾಖಲೆಗಳಿಂದ ಅಳಿಸಲಾಯಿತು.

ಈ ಕುರಿತು ಜೂನ್ 21 ರಂದು ದೂರು ನೀಡಲಾಗಿದ್ದು, ಎರಡು ದಿನಗಳ ನಂತರ ಎಲಿಪೆಯನ್ನು ಬಂಧಿಸಲಾಯಿತು. ಶುಕ್ರವಾರ ನ್ಯಾಯಾಲಯವು ಎಲಿಪೆಗೆ ಲಾಠಿ ಪ್ರಹಾರದೊಂದಿಗೆ ಒಂದು ವರ್ಷ ಮತ್ತು ಎರಡು ತಿಂಗಳು ಜೈಲು ಶಿಕ್ಷೆ ವಿಧಿಸಿದೆ.

error: Content is protected !!