Saturday, October 25, 2025

ಸಹಾಯದ ನೆಪದಲ್ಲಿ ವಿಧವೆಗೆ ಲೈಂಗಿಕ ಶೋಷಣೆ, ಬ್ಲ್ಯಾಕ್‌ಮೇಲ್; ಮೂವರ ವಿರುದ್ಧ FIR

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಹಾಯ ಮಾಡುವ ನೆಪದಲ್ಲಿ ಪರಿಚಯವಾದ ವ್ಯಕ್ತಿ, ವಿಧವೆ ಮಹಿಳೆಯನ್ನು ಲೈಂಗಿಕವಾಗಿ ಶೋಷಿಸಿ ಖಾಸಗಿ ಫೋಟೋಗಳ ಮೂಲಕ ಬ್ಲ್ಯಾಕ್‌ಮೇಲ್ ಮಾಡಿದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಗಂಡನನ್ನು ಕಳೆದುಕೊಂಡ ಮಹಿಳೆ ಜೊತೆ ವಿಶ್ವಾಸ ಬೆಳೆಸಿ ಅವಳನ್ನು ಮೋಸಗೊಳಿಸಿದ ಆರೋಪದ ಮೇರೆಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, 2021ರಲ್ಲಿ ಪತಿಯನ್ನು ಕಳೆದುಕೊಂಡ ಮಹಿಳೆ ತನ್ನ ನಾಲ್ಕು ವರ್ಷದ ಮಗಳೊಂದಿಗೆ ಪತಿ ನೋಡಿಕೊಳ್ಳುತ್ತಿದ್ದ ಗಾರ್ಮೆಂಟ್ಸ್ ಒಂದರ ಜವಾಬ್ದಾರಿ ಹೊತ್ತು ಮುನ್ನಡೆಸುತ್ತಿದ್ದರು. ಈ ವೇಳೆ ಚಂದ್ರಶೇಖರ್ ಎಂಬ ವ್ಯಕ್ತಿ ಸಹಾಯ ಮಾಡುವ ನೆಪದಲ್ಲಿ ಆಕೆಯ ಜೊತೆ ಸ್ನೇಹ ಬೆಳೆಸಿ, ನಿಧಾನವಾಗಿ ವಿಶ್ವಾಸ ಗೆದ್ದಿದ್ದ. ಬಳಿಕ ಆಕೆಗೆ ಮದುವೆಯಾಗುವ ಭರವಸೆ ನೀಡಿದರೂ, ಅವಳ ಇಚ್ಚೆಗೆ ವಿರುದ್ಧವಾಗಿ ಹಲವು ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.

ಹೀಗಿರುವಾಗ ಒಂದು ದಿನ ಚಂದ್ರಶೇಖರನ ಹೆಂಡತಿಯೆಂದು ಹೇಳಿಕೊಂಡು ಕವಿತಾ ಎನ್ನುವ ಮಹಿಳೆ ಕರೆ ಮಾಡಿ ಗದರಿಸಿದ್ದಳು. ಈ ವಿಷಯ ತಿಳಿದ ಚಂದ್ರಶೇಖರ ತಾನು ಎಲ್ಲವನ್ನೂ ನೋಡಿಕೊಳ್ಳುವುದಾಗಿ ಹೇಳಿ, ಮತ್ತೊಮ್ಮೆ ಈಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ.

ಪರಿಸ್ಥಿತಿ ಮತ್ತಷ್ಟು ಗಂಭೀರಗೊಂಡಿದ್ದು, ಚಂದ್ರಶೇಖರ್ ಅವರ ಹೆಂಡತಿ ಕವಿತಾ ಹಾಗೂ ಸಾಕಮ್ಮ ಎಂಬ ಸೇರಿ ಮೂವರು ಸಂತ್ರಸ್ತೆಯೊಂದಿಗೆ ಜಗಳವಾಡಿದ್ದರು. ಜೊತೆಗೆ ಒತ್ತಡ, ಬೆದರಿಕೆ ಮತ್ತು ನಿಂದನೆ ನಡೆಸಿದ್ದಾರೆ. ಆರೋಪಿಯು ಆಕೆಯ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ, ಹಾಗೂ ಗಾರ್ಮೆಂಟ್ಸ್ ಗೋಡೆಗಳಿಗೆ ಅಂಟಿಸುವುದಾಗಿ ಬೆದರಿಕೆ ಹಾಕಿದ್ದಾನೆ.

ಪೊಲೀಸರು ಆರೋಪಿಗಳಾದ ಚಂದ್ರಶೇಖರ್, ಕವಿತಾ ಮತ್ತು ಸಾಕಮ್ಮ ವಿರುದ್ಧ ಐಪಿಸಿ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿದ್ದಾರೆ.

error: Content is protected !!