March 14, 2026
Saturday, March 14, 2026
spot_img

ದೈವಕ್ಕೆ ಅವಮಾನ…ಬೆಂಗಳೂರಿನಲ್ಲಿ ಬಾಲಿವುಡ್ ನಟ ರಣವೀರ್‌ ಸಿಂಗ್‌ ವಿರುದ್ಧ ಕೇಸ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

2025ರ ನವೆಂಬರ್‌ನಲ್ಲಿ ಗೋವಾದಲ್ಲಿ ಇಂಟರ್‌ ನ್ಯಾಷನಲ್‌ ಫಿಲ್ಮ್‌ಫೆಸ್ಟಿವಲ್‌ ನಲ್ಲಿ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಕಾಂತಾರ ಚಿತ್ರದ ದೈವವನ್ನು ‘ಹೆಣ್ಣು ದೆವ್ವ’ ಎಂದು ಹೇಳಿ ಟೀಕೆಗೆ ಗುರಿಯಾಗಿದ್ದರು. ಇದಾದ ಬಳಿಕ ಕ್ಷಮೆ ಕೇಳಿದ್ದರು. ಆದ್ರೆ ಇಷ್ಟದರೂ ಸಂಕಷ್ಟ ತಪ್ಪದಂತಾಗಿದೆ.

ಇದೀಗ ರಣವೀರ್‌ ಹೇಳಿಕೆ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ವಕೀಲ ಪ್ರಶಾಂತ್ ಮೆಥಾಲ್ ಪಿಸಿಆರ್ ದಾಖಲಿಸಿ ಮಾಡಿಸಿದ್ದಾರೆ. ಬಿಎನ್‌ಎಸ್‌ ಸೆಕ್ಷನ್‌ 196, 299, 302 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

2025ರ ನವೆಂಬರ್‌ನಲ್ಲಿ ಗೋವಾದಲ್ಲಿ ಇಂಟರ್‌ ನ್ಯಾಷನಲ್‌ ಫಿಲ್ಮ್‌ಫೆಸ್ಟಿವಲ್‌ ನಲ್ಲಿ ರಿಷಬ್ ಅವರ ಕಾಂತಾರ ಸಿನಿಮಾವನ್ನ ಥಿಯೇಟರ್‌ನಲ್ಲಿ ನಾನು ನೋಡಿದೆ. ಅದ್ಭುತವಾಗಿತ್ತು ನಿಮ್ಮ ನಟನೆ. ಅದರಲ್ಲೂ ಹೆಣ್ಣು ದೆವ್ವ ನಿಮ್ಮ ಮೈಸೇರುವ ದೃಶ್ಯವಂತೂ ಅತ್ಯದ್ಭುತವಾಗಿತ್ತು. ಆ ದೃಶ್ಯದಲ್ಲಿ ನಿಮ್ಮ ನಟನೆ ಹಾಗೂ ನಿಮ್ಮ ನೋಟ ಮಜವಾಗಿತ್ತು ಅಂತ ರಣವೀರ್‌ ಸಿಂಗ್‌ ಅನುಕರಣೆ ಮಾಡಿದ್ದರು. ರಣವೀರ್‌ ಮಾಡಿದ ಅಪಹಾಸ್ಯಕ್ಕೆ ದೈವಾರಾಧಕರು ಆಕ್ರೋಶ ಹೊರಹಾಕಿದ್ದರು. ಆ ಬಳಿಕ ರಣವೀರ್‌ ಸಿಂಗ್‌ ಕ್ಷಮೆ ಕೋರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !