Sunday, January 11, 2026

ಸೋಮನಾಥದಲ್ಲಿ ‘ಶೌರ್ಯ ಯಾತ್ರೆ’: ಸಾವಿರ ವರ್ಷಗಳ ಸ್ಥೈರ್ಯಕ್ಕೆ ಪ್ರಧಾನಿ ಮೋದಿ ನಮನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೋಮನಾಥ ದೇವಾಲಯದ ಮೇಲೆ ನಡೆದ ಮೊದಲ ದಾಳಿಗೆ ಸಾವಿರ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿರುವ ನಾಲ್ಕು ದಿನಗಳ ರಾಷ್ಟ್ರೀಯ ಸ್ಮರಣಾರ್ಥ ಕಾರ್ಯಕ್ರಮದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಸೋಮನಾಥದಲ್ಲಿ ನಡೆದ ‘ಶೌರ್ಯ ಯಾತ್ರೆ’ಯಲ್ಲಿ ಭಾಗವಹಿಸಿದರು. ಸಾವಿರ ವರ್ಷಗಳ ಕಾಲ ನಂಬಿಕೆ, ತ್ಯಾಗ ಮತ್ತು ಪುನರುತ್ಥಾನದ ಸಂಕೇತವಾಗಿರುವ ಸೋಮನಾಥದ ಇತಿಹಾಸವನ್ನು ಸ್ಮರಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಜನವರಿ 1026ರಲ್ಲಿ ಘಜ್ನಿಯ ಮಹಮ್ಮದ್ ನಡೆಸಿದ ದಾಳಿಯ ನಂತರವೂ ಸೋಮನಾಥ ದೇವಾಲಯವು ಅನೇಕ ಬಾರಿ ನಾಶವಾದರೂ, ಪ್ರತಿಬಾರಿಯೂ ಪುನರ್ ನಿರ್ಮಾಣಗೊಂಡು ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಈ ಹಿನ್ನೆಲೆಯಲ್ಲೇ ಆಯೋಜಿಸಲಾದ ‘ಸೋಮನಾಥ ಸ್ವಾಭಿಮಾನ ಪರ್ವ್’ ಕಾರ್ಯಕ್ರಮದಲ್ಲಿ ಶೌರ್ಯ ಯಾತ್ರೆ ಪ್ರಮುಖ ಆಕರ್ಷಣೆಯಾಗಿದೆ.

ಇದನ್ನೂ ಓದಿ: FOOD | ಆರೋಗ್ಯಕರ ತರಕಾರಿ ಗಂಜಿ ಸವಿದು ನಿಮ್ಮ ದಿನ ಪ್ರಾರಂಭಿಸಿ!

ಹೂವಿನಿಂದ ಅಲಂಕರಿಸಲಾದ ತೆರೆದ ವಾಹನದಲ್ಲಿ ಪಟ್ಟಣದ ಮೂಲಕ ಸಾಗಿದ ಪ್ರಧಾನಿ ಮೋದಿ, ಮಾರ್ಗದುದ್ದಕ್ಕೂ ನೆರೆದಿದ್ದ ಜನರನ್ನು ಕೈಬೀಸಿ ಅಭಿನಂದಿಸಿದರು. ಢಮರುಗವನ್ನು ಬಾರಿಸುತ್ತಾ ಯಾತ್ರೆಯಲ್ಲಿ ಭಾಗವಹಿಸಿದ ಅವರು, ದೇವಾಲಯದ ರಕ್ಷಣೆಗೆ ಪ್ರಾಣ ತ್ಯಾಗ ಮಾಡಿದ ಅಸಂಖ್ಯಾತ ಯೋಧರಿಗೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹಾಗೂ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಉಪಸ್ಥಿತರಿದ್ದರು.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸೋಮನಾಥ ದೇವಾಲಯದ ಪುನರ್ ಸ್ಥಾಪನೆಗೆ ಪ್ರಮುಖ ಪಾತ್ರವಹಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಪ್ರಧಾನಿ ಮೋದಿ ಗೌರವ ಸಲ್ಲಿಸಿದರು. ನಂತರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು, ‘ಋಷಿಕುಮಾರ್’ ಹಾಗೂ ಕಲಾವಿದರೊಂದಿಗೆ ಸಂವಾದ ನಡೆಸಿದರು.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!