Thursday, November 13, 2025

ನನ್ನ ಜೀವನದಲ್ಲಿ ಅವರಿರೋದೇ ಒಂದು ವರ: ಯಾರ್ ಬಗ್ಗೆ, ಹೀಗ್ಯಾಕಂದ್ರು ರಶ್ಮಿಕಾ ಮಂದಣ್ಣ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಶ್ಮಿಕಾ ಮಂದಣ್ಣ ಅಭಿನಯದ ‘ದಿ ಗರ್ಲ್‌ಫ್ರೆಂಡ್’ ಚಿತ್ರದ ಸಕ್ಸಸ್ ಇವೆಂಟ್ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ನಟ ವಿಜಯ್ ದೇವರಕೊಂಡ ಹಾಜರಾಗಿದ್ದು, ಅವರ ಆಗಮನವೇ ಅಭಿಮಾನಿಗಳಲ್ಲಿ ಸಂಚಲನ ಸೃಷ್ಟಿಸಿತು. ಈ ವೇಳೆ ವೇದಿಕೆಯ ಮೇಲೆ ರಶ್ಮಿಕಾ ಭಾವುಕರಾಗಿ ಮಾತನಾಡಿದರು ಮತ್ತು ತಮ್ಮ ಜೀವನದಲ್ಲಿ ವಿಜಯ್ ದೇವರಕೊಂಡರ ಪಾತ್ರ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಹಂಚಿಕೊಂಡರು.

ರಶ್ಮಿಕಾ ಮಾತನಾಡುತ್ತಾ, “ನಮ್ಮ ಜೀವನದಲ್ಲಿ ವಿಜಯ್ ದೇವರಕೊಂಡರಂತಹ ವ್ಯಕ್ತಿ ಇರುವುದು ಒಂದು ವರ. ಅವರು ಯಾವಾಗಲೂ ನನ್ನನ್ನು ಪ್ರೋತ್ಸಾಹಿಸುತ್ತಿದ್ದಾರೆ, ಈ ಸಿನಿಮಾದ ಜರ್ನಿಯಲ್ಲೂ ನನ್ನೊಂದಿಗೆ ಇದ್ದರು,” ಎಂದು ಭಾವನಾತ್ಮಕವಾಗಿ ಹೇಳಿದರು. ತಮ್ಮ ಪಾತ್ರದ ಕಥೆಯು ತಮ್ಮ ಜೀವನದ ಕೆಲವು ಘಟನೆಗಳಿಗೆ ಹೋಲಿಕೆಯಾಗಿತ್ತು ಎಂಬುದನ್ನು ಉಲ್ಲೇಖಿಸಿ, “ಈ ಚಿತ್ರವನ್ನು ಪ್ರೇಕ್ಷಕರು ಇಷ್ಟಪಟ್ಟಿರುವುದೇ ನನಗೆ ಸಿಕ್ಕ ದೊಡ್ಡ ಪ್ರಶಸ್ತಿ,” ಎಂದರು.

ವಿಜಯ್ ದೇವರಕೊಂಡ ಕೂಡ ವೇದಿಕೆಯ ಮೇಲೆ ಮಾತನಾಡಿ, “ನಮ್ಮ ಸಂಗಾತಿಯನ್ನು ನಿಯಂತ್ರಿಸಲು ಯತ್ನಿಸಬಾರದು, ಅವರ ಕನಸುಗಳಿಗೆ ಬೆಂಬಲವಾಗಿರಬೇಕು. ಜೀವನ ಸರಳವಾಗಿಯೇ ಸಂತೋಷವಾಗಿರಲಿ,” ಎಂದು ಮನದಾಳದ ಮಾತುಗಳನ್ನು ಹಂಚಿಕೊಂಡರು.

ಇವೆಂಟ್‌ನ ಪ್ರಮುಖ ಕ್ಷಣ ಎಂದರೆ ವಿಜಯ್ ದೇವರಕೊಂಡ ರಶ್ಮಿಕಾ ಕೈಗೆ ಕಿಸ್ ನೀಡಿದ ಕ್ಷಣ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲೇ ವೈರಲ್ ಆಗಿದ್ದು, ಅಭಿಮಾನಿಗಳು ಇವರಿಬ್ಬರ ಕೆಮಿಸ್ಟ್ರಿಯನ್ನು ಮೆಚ್ಚಿಕೊಂಡಿದ್ದಾರೆ. ‘ಗೀತಾ ಗೋವಿಂದಂ’ನಿಂದ ಆರಂಭವಾದ ಈ ಜೋಡಿಯ ಪ್ರಯಾಣ ಈಗ ಮತ್ತೊಮ್ಮೆ ಪ್ರೇಕ್ಷಕರ ಹೃದಯ ಗೆದ್ದಿದೆ.

error: Content is protected !!