ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೋಷಿಯಲ್ ಮೀಡಿಯಾದಲ್ಲಿ 52ರ ಮಹಿಳೆ ಫೋಟೋ ಪೋಸ್ಟ್ ಮಾಡಿದ್ದಾಳೆ. ಈ ಫೋಟೋ ನೋಡಿ 26ರ ಯುವಕನಿಗೆ ಪ್ರೀತಿ ಶುರುವಾಗಿದೆ. ಮೆಸೇಜ್ ಬಳಿಕ ಫೋನ್ ಮೂಲಕ ಚಾಟಿಂಗ್ ಶುರುವಾಗಿದೆ. ಆದರೆ ಈ ಪ್ರೀತಿ ಕೊಲೆಯಲ್ಲಿ ಅಂತ್ಯವಾದ ಘಟನೆ ಉತ್ತರ ಪ್ರದೇಶದ ಮೈನ್‌ಪುರದಲ್ಲಿ ನಡೆದಿದೆ.
26ರ ಹರೆಯದ ಅರುಣ್ ರಜಪೂತ್ ಹೆಚ್ಚು ಪಿಯುಸಿ ಹುಡುಗಿಯಂತೆ ಕಾಣುತ್ತಿದ್ದ 52ರ ಹರೆಯದ ರಾಣಿಗೂ ಮೇಸೇಜ್ ಹಾಕಿದ್ದಾನೆ. ಕೆಲ ದಿನಗಳ ಬಳಿಕ ರಾಣಿಯಿಂದ ಪ್ರತಿಕ್ರಿಯೆ ಬಂದಿದೆ. ಈತನೂ ಮೇಸೇಜ್ ಮಾಡಿದ್ದ. ಅಲ್ಲಿಗೆ ಅರುಣ್ ರಜಪೂತ್ ಹಾಗೂ ರಾಣಿ ನಡುವೆ ಸ್ನೇಹ ಆರಂಭಗೊಂಡಿತ್ತು.
ಫಿಲ್ಟರ್ ಬಳಸಿ ಫೋಟೋ ಎಡಿಟ್ ಮಾಡಿ ಪೋಸ್ಟ್ ಮಾಡಿದ್ದ ಕಾರಣ 52ರ ಹರೆಯದ ರಾಣಿ ಹುಡುಗಿಯಂತೆ ಕಂಗೊಳಿಸಿದ್ದಳು. ಬಳಿಕ ಇವರಿಬ್ಬರ ಸ್ನೇಹ ಘಾಡವಾಗಿದೆ. ಫೋನ್ ನಂಬರ್ ವಿನಿಮಯ ಮಾಡಿದ್ದಾರೆ. ಫೋನ್ ಮೂಲಕ ಮಾತುಕತೆ ಶುರುವಾಗಿದೆ. ಆಕೆಯೂ ತನ್ನ ವಯಸ್ಸು ಹೇಳಲಿಲ್ಲ. ಈತ ಕೂಡ ಕೇಳಲಿಲ್ಲ. ಮಾತುಗಳು ಕೊನೆಗೆ ರೋಮ್ಯಾಂಟಿಕ್ ಮೂಡ್‌ಗೆ ತಲುಪಿದೆ. ಇದರ ನಡುವೆ ಯುವಕನ ಆರ್ಥಿಕ ಸಂಕಷ್ಟಕ್ಕೂ ಆಕೆ ನೆರವು ನೀಡಿದ್ದಾಳೆ. ಒಂದಿಷ್ಟು ಹಣ ನೀಡುತ್ತಾ ಬಂದಿದ್ದಾಳೆ.
ಯುವಕ ಕೂಡ ಮದುವೆಯಾಗುವುದಾಗಿ ಮಾತು ಕೊಟ್ಟಿದ್ದಾನೆ. ಬಳಿಕ ಇವರಿಬ್ಬರು ಭೇಟಿಯಾಗಲು ನಿರ್ಧರಿಸಿದ್ದಾರೆ. ಟಿಪ್ ಟಾಪ್ ಆಗಿ ರೆಡಿಯಾಗಿ ತನ್ನ ಲವರ್ ಭೇಟಿಯಾಗಲು ಅರುಣ್ ರಜಪೂತ್ ತೆರಳಿದ್ದಾನೆ. ತನ್ನ ಆಪ್ತ ಗೆಳೆಯರ ಬಳಿ ಗೆಳತಿ ಭೇಟಿಯಾಗುತ್ತಿರುವ ಸಂತೋಷವನ್ನು ಹಂಚಿಕೊಂಡಿದ್ದ. ಎಲ್ಲಾ ತಯಾರಿಯೊಂದಿಗೆ ಲವರ್ ಭೇಟಿಯಾಗಿದಾ ಅರುಣ್ ರಜಪೂತ್‌ಗೆ ನಿರಾಸೆಯಾಗಿದೆ. ಆಕೆ ಹುಡುಗಿ, ಯವತಿ ಅಲ್ಲ ಮುದುಕಿ ಎಂದು ಆಕ್ರೋಶಗೊಂಡಿದ್ದಾನೆ.
ಇತ್ತ 1 ರಿಂದ 1.5 ಲಕ್ಷ ರೂಪಾಯಿ ಆಕೆಯಿಂದ ಅರುಣ್ ರಜಪೂತ್ ಪಡೆದುಕೊಂಡಿದ್ದ. ಮದುವೆಯಾಗುವುದಾಗಿ ಮಾತು ಕೊಟ್ಟಿದ್ದ. ಇದರ ಜೊತೆಗೆ ರೊಮ್ಯಾಂಟಿಕ್ ಮಾತುಕತೆಗಳು ನಡೆದಿದೆ. ಮೊದಲ ಭೇಟಿಯಲ್ಲೇ ರಾಣಿ ತನ್ನ ಮದುವೆಯಾಗುವಂತೆ ಅರುಣ್ ರಜಪೂತ್‌ಗೆ ಒತ್ತಾಯ ಮಾಡಿದ್ದಾಳೆ. ಆದರೆ ಇದನ್ನು ಯುವಕ ನಿರಾಕರಿಸಿದ್ದಾನೆ. ಫಿಲ್ಟರ್ ಫೋಟೋ ನೋಡಿ ಇಷ್ಚಪಟ್ಟೆ. ಆದರೆ ವಯಸ್ಸು ಇಷ್ಟಾಗಿದೆ. ಹೇಗೆ ಮದುವೆಯಾಗಲಿ, ಸಾಧ್ಯವಿಲ್ಲ ಎಂದಿದ್ದಾನೆ. ಅಲ್ಲಿಗೆ ಇಬ್ಬರಿಗೂ ಜಗಳ ಶುರುವಾಗಿದೆ. ತನ್ನಿಂದ ಪಡೆದುಕೊಂಡಿರುವ ಹಣ ವಾಪಾಸ್ ನೀಡುವಂತೆ ಸೂಚಿಸಿದ್ದಾಳೆ. ಇಷ್ಟೇ ಅಲ್ಲ ಪ್ರೀತಿಸಿ ವಂಚಿಸಿದ ಅರುಣ್ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾಳೆ.
ಈ ಕುರಿತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳೋಣ ಎಂದು ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಬಳಿಕ ಆಕೆಯ ದುಪ್ಪಟದಿಂದ ಬಿಗಿದು ಹತ್ಯೆ ಮಾಡಿದ್ದಾನೆ. ನಿರ್ಜನ ಪ್ರದೇಶದಲ್ಲೇ ಆಕೆಯ ಮೃತದೇಹ ಎಸೆದು ಪರಾರಿಯಾಗಿದ್ದಾನೆ. ಪೊಲೀಸರು ಅರುಣ್ ರಜಪೂತ್ ಬಂಧಿಸಿ ವಿಚಾರಣೆ ನಡೆಸಿದಾಗ ನಡೆದ ಘಟನೆ ಬಯಲಾಗಿದೆ.