January18, 2026
Sunday, January 18, 2026
spot_img

RBIನ ನೂತನ ಉಪಗವರ್ನರ್‌ ಆಗಿ ಶಿರೀಶ್ ಚಂದ್ರ ಮುರ್ಮು ನೇಮಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ರಿಸರ್ವ್ ಬ್ಯಾಂಕ್ (RBI) ನ ನೂತನ ಉಪಗವರ್ನರ್‌ ಆಗಿ ಶಿರೀಶ್ ಚಂದ್ರ ಮುರ್ಮು ಅವರನ್ನು ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ.

ಪ್ರಸ್ತುತ ಉಪಗವರ್ನರ್ ರಾಜೇಶ್ವರ್ ರಾವ್ ಅವರ ಅವಧಿ ಅಕ್ಟೋಬರ್ 8ರಂದು ಮುಗಿಯಲಿದ್ದು, ಅದರ ನಂತರ ಅಕ್ಟೋಬರ್ 9ರಿಂದ ಮುರ್ಮು ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಪ್ರಸ್ತುತ ಅವರು ಆರ್‌ಬಿಐನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಆರ್‌ಬಿಐಗೆ ನಾಲ್ಕು ಉಪಗವರ್ನರ್‌ಗಳಿದ್ದು, ಹಣಕಾಸು ನೀತಿ, ಬ್ಯಾಂಕಿಂಗ್ ಮೇಲ್ವಿಚಾರಣೆ, ಹಾಗೂ ಹಣಕಾಸು ಮಾರುಕಟ್ಟೆಗಳ ನಿಯಂತ್ರಣದಂತಹ ಪ್ರಮುಖ ವಿಭಾಗಗಳನ್ನು ಪ್ರತ್ಯೇಕವಾಗಿ ನೋಡಿಕೊಳ್ಳುತ್ತಾರೆ. ಶಿರೀಶ್ ಚಂದ್ರ ಮುರ್ಮು ಅವರಿಗೆ ಯಾವ ಖಾತೆಯ ಜವಾಬ್ದಾರಿ ಸಿಗಲಿದೆ ಎಂಬುದು ಇನ್ನಷ್ಟೇ ಅಧಿಕೃತವಾಗಿ ಪ್ರಕಟಗೊಳ್ಳಬೇಕಿದೆ.

ಈ ನೇಮಕಾತಿಗೆ ಸಂಪುಟ ನೇಮಕಾತಿ ಸಮಿತಿ ಅನುಮೋದನೆ ನೀಡಿದ್ದು, ಶೀಘ್ರದಲ್ಲೇ ಅವರು ತಮ್ಮ ಹೊಸ ಹುದ್ದೆಯ ಜವಾಬ್ದಾರಿ ವಹಿಸಲಿದ್ದಾರೆ.

Must Read

error: Content is protected !!