March 11, 2026
Wednesday, March 11, 2026
spot_img

ಶಿವಂ ದುಬೆ ಸಿಂಪ್ಲಿಸಿಟಿಗೆ ಫ್ಯಾನ್ಸ್ ಫಿಧಾ: ಫ್ಲೈಟ್ ಸಿಗದಿದ್ದಕ್ಕೆ ಪತ್ನಿ ಜೊತೆ ರೈಲಿನಲ್ಲಿ ಪ್ರಯಾಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

2026ರ ಟಿ20 ವಿಶ್ವಕಪ್‌ನಲ್ಲಿ ಭಾರತದ ಐತಿಹಾಸಿಕ ಜಯಕ್ಕೆ ಕಾರಣರಾದ ಸ್ಟಾರ್ ಆಲ್‌ರೌಂಡರ್ ಶಿವಂ ದುಬೆ, ಅಹಮದಾಬಾದ್‌ನಿಂದ ಮುಂಬೈಗೆ ರೈಲಿನ ಮೂಲಕ ಪ್ರಯಾಣಿಸಿ ಸುದ್ದಿಯಾಗಿದ್ದಾರೆ.

ಟೂರ್ನಿಯುದ್ದಕ್ಕೂ 235 ರನ್ ಹಾಗೂ 5 ವಿಕೆಟ್ ಕಬಳಿಸಿದ ದುಬೆ, ಫೈನಲ್ ಪಂದ್ಯದ ಕೊನೆಯ ಓವರ್‌ನಲ್ಲಿ 24 ರನ್ ಚಚ್ಚಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ವಿಮಾನದ ಟಿಕೆಟ್‌ಗಳು ಲಭ್ಯವಿಲ್ಲದ ಕಾರಣ, ಮನೆಯಲ್ಲಿ ಕಾಯುತ್ತಿದ್ದ ಪುಟ್ಟ ಮಕ್ಕಳು ಹಾಗೂ ಕುಟುಂಬದವರನ್ನು ಬೇಗನೆ ಭೇಟಿಯಾಗಲು ಶಿವಂ ದುಬೆ ರೈಲು ಪ್ರಯಾಣ ಬೆಳೆಸಿದರು.

ಜನಸಂದಣಿ ಮತ್ತು ಅಭಿಮಾನಿಗಳ ಸದ್ದುಗದ್ದಲದ ನಡುವೆಯೂ, ಯಾವುದೇ ಅಹಂ ಇಲ್ಲದೆ ಸಾಮಾನ್ಯರಂತೆ ರೈಲಿನಲ್ಲಿ ಪ್ರಯಾಣಿಸುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !