ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹೊಸ ಸಿನಿಮಾದ ಫಸ್ಟ್ ಲುಕ್ ನ ಮೋಷನ್ ಪೋಸ್ಟರ್ ಕೂಡ ಬಿಡುಗಡೆಗೆ ಸಿದ್ಧವಾಗಿದೆ. ಆದ್ರೆ ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಒಂದು ಪೋಸ್ಟರ್ ಬಿಡುಗಡೆಗೊಂಡಿದ್ದು ಭಾರೀ ಕುತೂಹಲ ಮೂಡಿಸಿದೆ.
ಪೋಸ್ಟರ್‌ನಲ್ಲಿ ಶಿವಣ್ಣ ಧೋತಿ-ಶರ್ಟ್ ಧರಿಸಿ ಸೈಕಲ್ ಹಿಡಿದುಕೊಂಡಿರುವ ದೃಶ್ಯದಲ್ಲಿ ಕಾಣಿಸುತ್ತಾರೆ. ಅವರ ಮುಂದೆ ಅರಮನೆಯಂತ ಕಚೇರಿ ಮತ್ತು ರಸ್ತೆ ಅಕ್ಕಪಕ್ಕ ಸಾಲುಬದ್ಧವಾಗಿ ನಿಂತ ಬಿಳಿ ಕಾರುಗಳು ಚಿತ್ರಕ್ಕೆ ರೆಟ್ರೋ ಥೀಮ್ ನೀಡುತ್ತಿದೆ.
ಚಿತ್ರಕ್ಕೆ “One Frame and the Revolution Begins” ಎಂಬ ಲೈನ್ ಪೋಸ್ಟರ್‌ನಲ್ಲಿ ಸೇರಿಸಲಾಗಿದ್ದು, ಅಭಿಮಾನಿಗಳಲ್ಲಿ ಹೆಚ್ಚು ಆಸಕ್ತಿ ಮೂಡಿಸಿದೆ. ಈ ಚಿತ್ರದ ನಿರ್ದೇಶನವನ್ನು ಪರಮೇಶ್ವರ್ ಹಿವ್ರಲೆ ಮಾಡುತ್ತಿದ್ದಾರೆ. ನಿರ್ಮಾಣ ಎನ್. ಸುರೇಶ್ ರೆಡ್ಡಿ, ಸಂಗೀತ ಸುರೇಶ್ ಬೊಬ್ಬಿಲಿ ಹಾಗೂ ಕ್ಯಾಮರಾವರ್ಕ್ ಸತೀಶ್ ಮುತ್ಯಾಲ ಮಾಡಿದ್ದಾರೆ.
ಫಸ್ಟ್ ಲುಕ್ ಮೋಷನ್ ಪೋಸ್ಟರ್ ಅಕ್ಟೋಬರ್ 21 ರಂದು ಸಂಜೆ 4.33ಕ್ಕೆ ಬಿಡುಗಡೆ ಆಗಲಿದೆ. ಶ್ರೇಯಸ್ಸಿನ ಸಿನಿಮಾ ಎಂದು ನಿರೀಕ್ಷೆ ವ್ಯಕ್ತವಾಗಿದ್ದು, ಶಿವರಾಜ್ ಕುಮಾರ್ ವೈದ್ಯನ ಪಾತ್ರದಲ್ಲಿ ಕಾಣಿಸಲಿದ್ದಾರೆ.