March 13, 2026
Friday, March 13, 2026
spot_img

ವಿಮಾನ ಪ್ರಯಾಣಿಕರಿಗೆ ಶಾಕ್: ನಾಳೆಯಿಯಿಂದ ಇಂಡಿಗೋ ಪ್ರಯಾಣ ದುಬಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಗೋ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನದ ಟಿಕೆಟ್‌ಗಳ ಮೇಲೆ ಇಂಧನ ಸರ್‌ಚಾರ್ಜ್ ಅನ್ನು ವಿಧಿಸಲು ನಿರ್ದರಿಸಿದೆ.

ವಾಯುಯಾನ ಟರ್ಬೈನ್ ಇಂಧನ ಬೆಲೆಗಳಲ್ಲಿ ತೀವ್ರ ಏರಿಕೆಯಾದ ಕಾರಣ ಪ್ರಯಾಣ ದರ ಹೆಚ್ಚಳಕ್ಕೆ ಕಾರಣ ಎಂದು ವಿಮಾನಯಾನ ಸಂಸ್ಥೆ ಇಂಡಿಗೋ ತಿಳಿಸಿದೆ.

ನಾಳೆಯಿಂದ (ಮಾರ್ಚ್ 14) ಈ ಹೊಸ ದರ ಜಾರಿಯಾಗಲಿದ್ದು, ಇಂಡಿಗೋ ವಿಮಾನಗಳಲ್ಲಿನ ಎಲ್ಲಾ ಹೊಸ ಬುಕಿಂಗ್‌ಗಳಿಗೆ ಒಟ್ಟಾರೆ ಬೆಲೆಗಳು ಈ ಕೆಳಗಿನ ಹೆಚ್ಚುವರಿ ಇಂಧನ ಶುಲ್ಕವನ್ನು ಒಳಗೊಂಡಿರುತ್ತವೆ. ಭಾರತದೊಳಗೆ 425 ರೂ., ಮಧ್ಯಪ್ರಾಚ್ಯಕ್ಕೆ 900 ರೂ., ಆಗ್ನೇಯ ಏಷ್ಯಾ ಮತ್ತು ಚೀನಾಗೆ 1800 ರೂ., ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾ 1800 ರೂ. ಮತ್ತು ಯುರೋಪ್​ಗೆ 2,300 ರೂ. ಟಿಕೆಟ್ ದರ ಹೆಚ್ಚಳವಾಗಲಿದೆ.

ಈ ಕುರಿತು ಇಂಡಿಗೋ ಮಾಹಿತಿ ನೀಡಿದ್ದು, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಸಮಸ್ಯೆಗಳ ನಂತರ ಇಂಧನ ಬೆಲೆಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !