Wednesday, January 14, 2026
Wednesday, January 14, 2026
spot_img

ಆಭರಣ ಪ್ರಿಯರಿಗೆ ಶಾಕ್! ವಾರಾಂತ್ಯದಲ್ಲಿ ಚಿನ್ನ, ಬೆಳ್ಳಿ ಬೆಲೆಗಳ ಭರ್ಜರಿ ಜಿಗಿತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ವಾರಾಂತ್ಯದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಭಾರೀ ಏರಿಕೆ ಕಾಣುವ ಮೂಲಕ ಹೂಡಿಕೆದಾರರು ಹಾಗೂ ಆಭರಣ ಪ್ರಿಯರನ್ನು ಆಶ್ಚರ್ಯಗೊಳಿಸಿವೆ. ಶುಕ್ರವಾರ 65ರೂ. ಏರಿಕೆ ಕಂಡಿದ್ದ ಸ್ವರ್ಣ ದರ ಇದೀಗ ಮತ್ತಷ್ಟು 125 ರೂ. ಹೆಚ್ಚಳದೊಂದಿಗೆ ಗಣನೀಯವಾಗಿ ಜಿಗಿದಿದೆ.

ಆಭರಣ ಚಿನ್ನದ ಬೆಲೆ (22 ಕ್ಯಾರಟ್): 11,900 ರೂ. ಗಡಿಯನ್ನು ಮುಟ್ಟಿದೆ.
ಅಪರಂಜಿ ಚಿನ್ನದ ಬೆಲೆ (24 ಕ್ಯಾರಟ್): 13,000 ರೂ. ಗಡಿಯ ಸಮೀಪಕ್ಕೆ ಸಾಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆ: ವಿದೇಶಗಳಲ್ಲೂ ಚಿನ್ನದ ಬೆಲೆ ಗಣನೀಯವಾಗಿ ಹೆಚ್ಚಳವಾಗಿದೆ.

ಬೆಳ್ಳಿ ದರವು ವಾರಾಂತ್ಯದಲ್ಲಿ ಸಿಕ್ಕಾಪಟ್ಟೆ ಜಿಗಿದಿದ್ದು, ಒಂದೇ ದಿನದಲ್ಲಿ ಬರೋಬ್ಬರಿ 9 ರೂ. ಹೆಚ್ಚಳ ಕಂಡಿದೆ. 176 ರೂ. ಇದ್ದ ಬೆಳ್ಳಿ ದರ ಇದೀಗ 185 ರೂ.ಗೆ ಜಿಗಿದಿದೆ.

ಲೋಹಕ್ಯಾರಟ್/ಅಳತೆದರ
ಚಿನ್ನ22 ಕ್ಯಾರಟ್ (10 ಗ್ರಾಂ)1,19,000 ರೂ.
ಚಿನ್ನ24 ಕ್ಯಾರಟ್ (10 ಗ್ರಾಂ)1,29,820 ರೂ.
ಬೆಳ್ಳಿ100 ಗ್ರಾಂ18,500 ರೂ.

Most Read

error: Content is protected !!