Tuesday, November 4, 2025

ಶಾಸಕ ವಿನಯ್ ಕಲುಕರ್ಣಿಗೆ ಶಾಕ್: ಸಾಕ್ಷಿ ನಾಶ ಪ್ರಕರಣ ಎತ್ತಿಹಿಡಿದ ಸುಪ್ರೀಂ ಕೋರ್ಟ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗಿಶಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಇದೀಗ ಮತ್ತೊಂದು ಹಿನ್ನಡೆ ಅನುಭವಿಸಿದ್ದಾರೆ.

ವಿನಯ್ ಕುಲಕರ್ಣಿ ಮೇಲಿದ್ದ ಸಾಕ್ಷಿ ನಾಶ ಪ್ರಕರಣವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಸಿಬಿಐ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ಸುಪ್ರೀಂ ಕೋರ್ಟ್, ವಿನಯ್ ಕುಲಕರ್ಣಿ ಮೇಲಿನ ಸಾಕ್ಷಿ ನಾಶ ಪ್ರಕರಣ ಎತ್ತಿಹಿಡಿದೆ.

ಯೋಗಿಶಗೌಡ ಕೊಲೆ ಪ್ರಕರಣದಲ್ಲಿ ಸಾಕ್ಷಿ ನಾಶ ಆರೋಪ ವಿನಯ ಕುಲಕರ್ಣಿ ಮೇಲೆ ಹೊರಿಸಲಾಗಿತ್ತು. ಆದರೆ ಹೈಕೋರ್ಟ್ ಈ ಹಿಂದೆ ವಿನಯ ಕುಲಕರ್ಣಿ ಮೇಲಿದ್ದ‌ ಸಾಕ್ಷಿ ನಾಶ ಪ್ರಕರಣ ವಜಾ ಮಾಡಿತ್ತು. ಈ ತೀರ್ಪಿನ ವಿರುದ್ದ ಸಿಬಿಐ ಅಧಿಕಾರಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಯೋಗೇಶ್ ಗೌಡ ಕೊಲೆ ಪ್ರಕರಣದ ಪ್ರಮುಖ ಆರೋಪಿ ವಿನಯ್ ಕುಲಕರ್ಣಿ ಸದ್ಯ ಸೆರೆಮನೆ ವಾಸದಲ್ಲಿದ್ದಾರೆ. 2016 ಜೂನ್ 15ರಂದು ಯೋಗೇಶ್ ಗೌಡ ಹತ್ಯೆಯಾಗಿತ್ತು. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ತನಿಖೆ ಆರಂಭಿಸಿದ ಸಿಬಿಐ, ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಪಾತ್ರವಿರುವ ಅನುಮಾನದ ಹಿನ್ನಲೆಯಲ್ಲಿ ಅರೆಸ್ಟ್ ಮಾಡಿತ್ತು.

ಜೈಲು ಸೇರಿದ ವಿನಯ್ ಕುಲಕರ್ಣಿ ಜಾಮೀನು ಪ್ರಯತ್ನಗಳು ನಡೆದಿತ್ತು. ಆದರೆ ಬಾರಿ ಹಿನ್ನಡೆಯಾಗಿತ್ತು. ಕೊನೆಗೆ ಸುಪ್ರೀಂ ಕೋರ್ಟ್‌ನಿಂದ ವಿನಯ್ ಕುಲಕರ್ಣಿ ಜಾಮೀನು ಪಡೆದು ಹೊರಬಂದಿದ್ದರು. ಆದರೆ ಈ ವೇಳೆ ಸಿಬಿಐ ಅಧಿಕಾರಿಗಳು ಆರೋಪಿ ಪ್ರಭಾವಿಯಾಗಿರುವ ಕಾರಣ ಸಾಕ್ಷ್ಯಿ ನಾಶದ ಆತಂಕ ವ್ಯಕ್ತಪಡಿಸಿತ್ತು. ಹೀಗಾಗಿ ಜಾಮೀನು ನಿರಾಕರಿಸುವಂತೆ ಸೂಚಿಸಿತ್ತು. ಆದರೆ ಜಾಮೀನು ಮಂಜೂರು ಮಾಡಲಾಗಿತ್ತು. ಇತ್ತ ಸಾಕ್ಷಿ ನಾಶದ ಕಾರಣ ಗಂಭೀರ ಆರೋಪವನ್ನು ಸಿಬಿಐ ವಿನಯ್ ಕುಲಕರ್ಣಿ ಮೇಲೆ ಹೊರಿಸಿತ್ತು. ಆದರೆ ವಿನಯ್ ಕುಲಕರ್ಣಿ ಹೈಕೋರ್ಟ್ ಮೂಲಕ ಸಾಕ್ಷಿ ನಾಶ ಪ್ರಕರಣವನ್ನು ವಜಾಗೊಳಿಸುವಲ್ಲಿ ವಿನಯ್ ಕುಲಕರ್ಣಿ ಯಶಸ್ವಿಯಾಗಿದ್ದರು.

ಸಿಬಿಐ ಅಧಿಕಾರಿಗಳು ಸಲ್ಲಿಸಿದ್ದ ಜಾಮೀನು ರದ್ದು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತ್ತು. ಜೂನ್ ತಿಂಗಳಲ್ಲಿ ವಿನಯ್ ಕುಲಕರ್ಣಿ ಜಾಮೀನು ರದ್ದು ಮಾಡಿತ್ತು. ಜೂನ್ 6 ರಂದು ಜಾಮೀನು ರದ್ದುಗೊಳಿಸಿದ ಕೋರ್ಟ್, ಒಂದು ವಾರದಲ್ಲಿ ಜನಪ್ರತಿನಿದಿಗಳ ವಿಶೇಷ ನ್ಯಾಯಾಲದ ಎದುರು ಶರಣವಾಗುವಂತೆ ಸೂಚಿಸಿತ್ತು. ಇದರಂತೆ ಜೂನ್ 14 ರಂದು ವಿನಯ್ ಕುಲಕರ್ಣಿ ಶರಣಾಗಿದ್ದರು. ಬಳಿಕ ಸಿಬಿಐ ವಿನಯ್ ಕುಲಕರ್ಣಿ ವಶಕ್ಕೆ ಪಡೆದು ನ್ಯಾಯಾಲಯದ ಎದರು ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

error: Content is protected !!