Tuesday, September 9, 2025

ಏಷ್ಯಾಕಪ್ ಆರಂಭಕ್ಕೂ ಮುನ್ನ ಪಾಕಿಸ್ತಾನ ತಂಡಕ್ಕೆ ಶಾಕ್: ಕ್ರಿಕೆಟ್​ಗೆ ವಿದಾಯ ಹೇಳಿದ ವೇಗಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

2025 ರ ಏಷ್ಯಾಕಪ್ ಆರಂಭಕ್ಕೂ ಮುನ್ನ ಪಾಕಿಸ್ತಾನ ತಂಡಕ್ಕೆ ಟೂರ್ನಿ ಆರಂಭಕ್ಕೂ ಮುನ್ನವೇ ಆಘಾತ ಎದುರಾಗಿದೆ.ತಂಡದ 31 ವರ್ಷದ ಎಡಗೈ ವೇಗದ ಬೌಲರ್ ಉಸ್ಮಾನ್ ಶಿನ್ವಾರಿ ಇದ್ದಕ್ಕಿದ್ದಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ.

ಆದಾಗ್ಯೂ ಶಿನ್ವಾರಿ ಏಷ್ಯಾಕಪ್ ತಂಡದಲ್ಲಿ ಆಯ್ಕೆ ಮಾಡಿಲ್ಲ.

ಡಿಸೆಂಬರ್ 2013 ರಲ್ಲಿ ದುಬೈನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟಿ20 ಪಂದ್ಯದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಉಸ್ಮಾನ್ ಶಿನ್ವಾರಿ, ಅಕ್ಟೋಬರ್ 2017 ರಲ್ಲಿ ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ಅದೇ ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಇದಲ್ಲದೆ, ಅವರು ಡಿಸೆಂಬರ್ 2019 ರಲ್ಲಿ ಪಾಕಿಸ್ತಾನ ಪರ ಏಕೈಕ ಟೆಸ್ಟ್ ಪಂದ್ಯವನ್ನು ಆಡಿದರು. ಅಚ್ಚರಿಯೆಂದರೇ ಅದೇ ಶ್ರೀಲಂಕಾ ವಿರುದ್ಧವೇ ಅವರು ಟೆಸ್ಟ್ ಮಾದರಿಗೂ ಪಾದಾರ್ಪಣೆ ಮಾಡಿದ್ದರು. ಆದಾಗ್ಯೂ ಅವರು 2019 ರಿಂದ ಪಾಕಿಸ್ತಾನ ತಂಡದಿಂದ ಹೊರಗುಳಿದಿದ್ದು, ಯಾವ ಪಂದ್ಯವನ್ನು ಆಡಿಲ್ಲ. ಇದರಿಂದಾಗಿ ಅವರು ಇದ್ದಕ್ಕಿದ್ದಂತೆ ನಿವೃತ್ತಿ ಘೋಷಿಸಿದ್ದಾರೆ.

ಉಸ್ಮಾನ್ ಶಿನ್ವಾರಿ ಅವರ ಹಠಾತ್ ನಿವೃತ್ತಿಗೆ ಪಿಸಿಬಿ ನಿರ್ಲಕ್ಷ್ಯವೇ ದೊಡ್ಡ ಕಾರಣ ಎಂದು ಹೇಳಲಾಗುತ್ತಿದೆ. ಒಂದು ಕಾಲದಲ್ಲಿ ಅವರನ್ನು ಪಾಕಿಸ್ತಾನ ತಂಡದ ಭವಿಷ್ಯ ಎಂದು ಪರಿಗಣಿಸಲಾಗಿತ್ತು. ಆದರೆ ಸ್ವಲ್ಪ ಸಮಯದ ನಂತರ, ಅವರಿಗೆ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟಕರವಾಯಿತು. ಇದು ಮಾತ್ರವಲ್ಲದೆ ನಿರಂತರವಾಗಿ ಗಾಯದಿಂದ ಬಳಲುತ್ತಿದ್ದ ಉಸ್ಮಾನ್ ಶಿನ್ವಾರಿ ಬೆನ್ನುನೋವಿನಿಂದಾಗಿ ತುಂಬಾ ತೊಂದರೆಗೊಳಗಾಗಿದ್ದರು. ಇದು ಕೂಡ ಅವರ ನಿವೃತ್ತಿ ನಿರ್ಧಾರಕ್ಕೆ ಒಂದು ಕಾರಣ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ