April 12, 2026
Sunday, April 12, 2026
spot_img

ಬೆಳ್ತಂಗಡಿಯಲ್ಲಿ ಶಾಕಿಂಗ್ ಘಟನೆ: ಮನೆ ಹಿಂಭಾಗದ ಶೆಡ್ ನಲ್ಲಿದ್ದ ಡೀಸೇಲ್ ದಾಸ್ತಾನು ಕಂಡು‌ ದಂಗಾದ ಪೊಲೀಸರು!

ಹೊಸ ದಿಗಂತ ವರದಿ, ಬೆಳ್ತಂಗಡಿ :

ಡಿಸೇಲ್ ಅಕ್ರಮವಾಗಿ ದಾಸ್ತಾನು ಮಾಡಿದ್ದ ಅಡ್ಡೆಯ ಮೇಲೆ ಮಾ.9 ರಂದು ತಡರಾತ್ರಿ ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿನಿ.ಸಿ.ಕೆ ನೇತೃತ್ವದಲ್ಲಿ ಪೊಲೀಸರ ತಂಡ ದಾಳಿ ನಡೆಸಿದ್ದು,3 ಲಕ್ಷದ 50 ಸಾವಿರ ರೂಪಾಯಿ ಮೌಲ್ಯದ ಡೀಸೆಲ್‌ ಅನ್ನು ವಶಪಡಿಸಿಕೊಂಡಿದ್ದಾರೆ.

ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿಸಿ ಸಿ.ಕೆ ಮತ್ತು ಸಿಬ್ಬಂದಿ ಪ್ರವೀಣ್ ಮುರುಗೋಳಿ ಚಾಲಕ ಪ್ರವೀಣ್ ಅವರು ಸೋಮವಾರ ಮದ್ಯ ರಾತ್ರಿ ರೌಡ್ಸ್ ನಲ್ಲಿರುವಾಗ ಮಾಹಿತಿದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಮುದೆಲ್ತಿಯಾರ್ ಎಂಬಲ್ಲಿನ ಬನಶಂಕರಿ ನಿಲಯದ ಜಗದೀಶ್(35) ಎಂಬುವವರ ಮನೆಯ ಹಿಂಭಾಗದ ಶೆಡ್ ಮೇಲೆ ದಾಳಿ ನಡೆಸಿದ್ದಾರೆ.

ಈ ವೇಳೆ 20 ಬ್ಯಾರಲ್ ನಲ್ಲಿ 200 ಲೀಟರ್ ನಂತೆ ಒಟ್ಟು 4,000 ಲೀಟರ್, 5 ಬ್ಯಾರಲ್ ಕ್ಯಾನ್ ನಲ್ಲಿ 35 ಲೀಟರ್ ನಂತೆ ಒಟ್ಟು 175 ಲೀಟರ್ ಸೇರಿ ಒಟ್ಟು ಶೇಖರಿಸಿಟ್ಟಿದ್ದ 4,175 ಲೀಟರ್ ಡೀಸೆಲ್ ಹಾಗೂ 5 ಖಾಲಿ ಕ್ಯಾನ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಜಗದೀಶ್ ಮತ್ತು ಹರೀಶ್ ಎಂಬವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !