ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನ ಸಭಾ ಕ್ಷೇತ್ರದ ಮೀಸಲು ಸ್ಥಾನದ ಶಾಸಕಿ ಭಾಗೀರಥಿ ಮುರುಳ್ಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಲಾಗಿದ್ದು, ಈ ಬೆಳವಣಿಗೆ ವ್ಯಾಪಕ ಆಕ್ರೋಶ, ಆಕ್ಷೇಪಕ್ಕೆ ಕಾರಣವಾಗಿದೆ.
ಬಿಲ್ಲವ ಸಂದೇಶ್ ಎಂಬ ಹೆಸರಿನ ಖಾತೆಯಲ್ಲಿ ವ್ಯಕ್ತಿಯು ಪೋಸ್ಟ್ ಹಾಕಿದ್ದು ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಲಾಗಿದೆ.
ಘಟನೆ ಕುರಿತು ಕರಾವಳಿಯ ಜನಪ್ರತಿನಿಧಿಗಳು, ಶಾಸಕರ ಅಭಿಮಾನಿಗಳು, ಪಕ್ಷ ಮುಖಂಡರು, ಕಾರ್ಯಕರ್ತರು ಖಂಡನೆ ವ್ಯಕ್ತಪಡಿಸಿದ್ದು ಈ ಕುರಿತು ಕ್ರಮ ಕೈಗೊಳ್ಳದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

