ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ ಪ್ರವಾಸಿಗರ ಹಾಗೂ ಸ್ಥಳೀಯರ ನೆಚ್ಚಿನ ತಾಣವಾಗಿರುವ ಸಿಡ್ನಿಯ ಸುಪ್ರಸಿದ್ಧ ಬೊಂಡಿ ಬೀಚ್ ಇಂದು ಭೀಕರ ಸಾಮೂಹಿಕ ಗುಂಡಿನ ದಾಳಿಗೆ ಸಾಕ್ಷಿಯಾಗಿದೆ. ಸುಮಾರು ಎರಡು ಗಂಟೆಗಳ ಹಿಂದೆ ನಡೆದ ಈ ದಾಳಿಯಲ್ಲಿ, ಕನಿಷ್ಠ 10 ಮಂದಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
ಘಟನೆಯು ಅತ್ಯಂತ ಭೀಕರವಾಗಿದ್ದು, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಪ್ರಕಾರ, ದಾಳಿಯ ವೇಳೆ ಸುಮಾರು 50 ಗುಂಡುಗಳ ಸರಣಿ ಸದ್ದು ಕೇಳಿಬಂದಿದೆ. ಇದರಿಂದಾಗಿ ಬೀಚ್‌ನಲ್ಲಿ ನೆರೆದಿದ್ದ ನೂರಾರು ಜನರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ. ಗಾಯಗೊಂಡವರನ್ನು ತಕ್ಷಣವೇ ಸ್ಥಳದಿಂದ ಆಸ್ಪತ್ರೆಗಳಿಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆಯ ಕುರಿತು ಆಸ್ಟ್ರೇಲಿಯಾ ಪ್ರಧಾನಿ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಈ ಕೃತ್ಯವನ್ನು “ಆಘಾತಕಾರಿ ಮತ್ತು ದುಃಖಕರ” ಎಂದು ಬಣ್ಣಿಸಿದ್ದಾರೆ. ಸಿಡ್ನಿಯಂತಹ ಶಾಂತಿಯುತ ಸ್ಥಳದಲ್ಲಿ ನಡೆದ ಈ ಸಾಮೂಹಿಕ ಹತ್ಯಾಕಾಂಡವು ಇಡೀ ಆಸ್ಟ್ರೇಲಿಯಾಕ್ಕೆ ಆಘಾತ ನೀಡಿದೆ.

