Wednesday, December 31, 2025

SHOCKING | ವಿಟ್ಲದ ಇಲೆಕ್ಟ್ರಾನಿಕ್ಸ್ ಶಾಪ್ ನಲ್ಲಿ ಭೀಕರ ಅಗ್ನಿ ಅವಘಡ: ನಾಲ್ಕಕ್ಕೂ ಅಧಿಕ ಅಂಗಡಿಗಳು ಸುಟ್ಟು ಭಸ್ಮ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಗಳೂರು ರಸ್ತೆಯ ಇಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತೀವ್ರಗೊಂಡು ಅಕ್ಕಪಕ್ಕದ ಅಂಗಡಿಗಳಿಗೂ ವಿಸ್ತರಣೆಯಾಗಿ ನಾಲ್ಕಕ್ಕೂ ಅಧಿಕ ಅಂಗಡಿಗಳು ಭಸ್ಮವಾಗಿದೆ.

ಸಂತೋಷ್ ಕುಮಾರ್ ಕೊಡಂಗೆ ಮಾಲಕತ್ವದ ಇಲೆಕ್ಟ್ರಾನಿಕ್ಸ್ ಏಕಾಏಕಿ ಬೆಂಕಿ ಕಾಣಿಸಿಕೊಂಡು ನಿಯಂತ್ರಣಕ್ಕೆ ಬಾರದ ಸ್ಥಿತಿಗೆ ತಲುಪಿದೆ. ಅಮಿತ್ ಹೋಟೇಲ್ ಹಾಗೂ ಸ್ಟಾರ್ ವೈನ್ಸ್ ವರೆಗೂ ವಿಸ್ತರಣೆಯಾಗಿದ್ದು, ಇದರ ನಡುವೆ ಇದ್ದ ಎಸ್. ಬಿ. ಟೈಲರಿಂಗ್ ಶಾಪ್, ಪಡೀಲ್ ಪಾಸ್ಟ್ ಫುಡ್, ಸಹಿತ ಸಣ್ಣ ಅಂಗಡಿಗಳೂ ಬೆಂಕಿಗೆ ಆಹುತಿಯಾಗಿದೆ. ಬಂಟ್ವಾಳದಿಂದ ಅಗ್ನಿಶಾಮಕ ವಾಹನ ಬಂದಿದ್ದು, ಬೆಂಕಿ ನಿಯಂತ್ರಣಕ್ಕೆ ಬರುತ್ತಿಲ್ಲ.

ವಿದ್ಯುತ್ ಶಾರ್ಟ್ ಸರ್ಕೀಟ್ ಆಗಿರುವ ಹಿನ್ನಲೆಯಲ್ಲಿ ವಿಟ್ಲ ಪೇಟೆಯಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗಿದೆ ಎಂದು ಮೆಸ್ಕಾಂ ಹೇಳಿದೆ. ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಯಾಗಿದೆ ಎಂದು ಹೇಳಲಾಗಿದೆ. ಮಂಗಳೂರು ರಸ್ತೆ ಸಂಪೂರ್ಣ ಜನರಿಂದ ತುಂಬಿ ಬ್ಲಾಕ್ ಆಗಿದೆ.

error: Content is protected !!