January20, 2026
Tuesday, January 20, 2026
spot_img

SHOCKING | ಪಾಕಿಸ್ತಾನದಲ್ಲಿ ‘MI-17 ಹೆಲಿಕಾಪ್ಟರ್’ ಪತನ: ಐವರು ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿಭಾರೀ ಮಳೆಯ ನಡುವೆ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದ Mi-17 ಹೆಲಿಕಾಪ್ಟರ್ ಪತನಗೊಂಡಿದೆ.

Mi-17 ಹೆಲಿಕಾಪ್ಟರ್ ಪತನದಿಂದ ಐವರು ಸಿಬ್ಬಂದಿ ಸಾವನ್ನಪ್ಪಿದ್ದಾರೆ.

ಮಳೆ ಪೀಡಿತ ಪ್ರದೇಶಗಳಿಗೆ ಸಹಾಯ ಮಾಡಲು ಹೆಲಿಕಾಪ್ಟರ್ ತುರ್ತು ಕಾರ್ಯಾಚರಣೆಯಲ್ಲಿತ್ತು. ಅಪಘಾತಕ್ಕೆ ಕೆಟ್ಟ ಹವಾಮಾನ ಕಾರಣ ಎಂದು ವರದಿಯಾಗಿದ್ದು, ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ಮೊಹಮಂಡ್ ಜಿಲ್ಲೆಯ ಪಾಂಡಿಯಾಲಿ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ ಎಂದು ಮುಖ್ಯಮಂತ್ರಿ ಅಲಿ ಅಮೀನ್ ಗಂಡಾಪುರ್ ತಿಳಿಸಿದ್ದಾರೆ.

‘ಬಜೌರ್‌’ನ ಮಳೆ ಪೀಡಿತ ಪ್ರದೇಶಗಳಿಗೆ ಪರಿಹಾರ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಪ್ರಾಂತೀಯ ಸರ್ಕಾರದ MI-17 ಹೆಲಿಕಾಪ್ಟರ್ ಕೆಟ್ಟ ಹವಾಮಾನದಿಂದಾಗಿ ಮೊಹ್ಮಂಡ್ ಜಿಲ್ಲೆಯ ಪಾಂಡಿಯಾಲಿ ಪ್ರದೇಶದಲ್ಲಿ ಪತನಗೊಂಡಿದೆ’ ಎಂದು ಗಂಡಾಪುರ ಹೇಳಿಕೆಯಲ್ಲಿ ತಿಳಿಸಿದೆ.

Must Read