ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಉತ್ತರ ಜಿಲ್ಲೆಯ ನೆಲಮಂಗಲ ಬಳಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಪರ್ಪ್ಯೂಮ್ ಗೋದಾಮಿಗೆ ಬೆಂಕಿ ಬಿದ್ದು, ಮೂವರು ಸಜೀವ ದಹನವಾಗಿದ್ದು, 5 ಮಂದಿ ಗಾಯಗೊಂಡ ಘಟನೆ ನಡೆದಿದೆ.
ಅಗ್ನಿ ಅವಘಡಕ್ಕೆ ಮುಗಿಲೆತ್ತರಕ್ಕೆ ಬೆಂಕಿಯ ಜ್ವಾಲೆ ವ್ಯಾಪಿಸಿದೆ. ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಬೆಂಕಿ ಬೀಳುತ್ತಿದ್ದಂತೆ ಅದರಲ್ಲಿದ್ದ, 40 ಸಿಬ್ಬಂದಿ ಅಲ್ಲಿಂದ ಓಡಿ ಪಾರಾಗಿದ್ದಾರೆ. ಬೆಂಕಿ ಪಕ್ಕದ ಎಸಿ ಗೋಡೌನ್‍ಗೆ ತಗುಲಿದೆ. ಅಲ್ಲದೇ ಗೋಡೌನ್‍ನಲ್ಲಿದ್ದ ವಾಹನಗಳು ಸುಟ್ಟು ಕರಕಲಾಗಿವೆ.



