Sunday, December 14, 2025

ಯಹೂದಿಗಳ ಮೇಲೆ ಗುಂಡಿನ ದಾಳಿ: ಬರಿಗೈಯಲ್ಲೇ ಗನ್ ಕಿತ್ತುಕೊಂಡ ವ್ಯಕ್ತಿಯ ಸಾಹಸದ ವಿಡಿಯೋ ವೈರಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:


ಆಸ್ಟ್ರೇಲಿಯಾದ ಬೋಂಡಿ ಬೀಚ್‌ ನಲ್ಲಿ ಭಾನುವಾರ ಯಹೂದಿಗಳ ಮೇಲೆ ಇಬ್ಬರು ದಾಳಿಕೋರರು ಗುಂಡಿನ ದಾಳಿ ನಡೆಸಿದ್ದು, ಇದರಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ .

ನಾರ್ತ್ ಬೋಂಡಿ ಬೀಚ್‌ನಲ್ಲಿ ಹೆಚ್ಚಿನ ಸಂಖ್ಯೆಯ ಜನರು ಮರಳಿನ ಮೇಲೆ ಓಡುತ್ತಿರುವುದನ್ನು ನೋಡಬಹುದು. ಇದೇ ವೇಳೆ ದಿಢೀರ್ ಗುಂಡಿನ ಸದ್ದು ಕೇಳಿಸಿದೆ. ಪೊಲೀಸರು ಒಬ್ಬ ದಾಳಿಕೋರನನ್ನು ಗುಂಡಿಕ್ಕಿ ಕೊಂದಿದ್ದು, ಇನ್ನೊಬ್ಬನನ್ನು ಜೀವಂತವಾಗಿ ಹಿಡಿದಿದ್ದಾರೆ.

ಇದೇ ವೇಳೆ, ರೈಫಲ್ ಹಿಡಿದು ಆರ್ಭಟಿಸುತ್ತಿದ್ದ ಉಗ್ರನೊಬ್ಬನ ಮೇಲೆ ವ್ಯಕ್ತಿಯೊಬ್ಬರು ಮಿಂಚಿನಂತೆ ದಾಳಿ ಮಾಡಿ ರೈಫಲ್ ಕಿತ್ತುಕೊಂಡು ಅಟ್ಟಾಡಿಸಿದ ಘಟನೆಯ ದೃಶ್ಯವೊಂದು ವೈರಲ್ ಆಗುತ್ತಿದೆ. ಶಸ್ತ್ರ ಇಲ್ಲದೆ ಬರಿಗೈಲಿದ್ದರೂ ಉಗ್ರನ ಮೇಲೆ ಎರಗಿ ಹೋಗುವ ಸಾಹಸ ಮಾಡಿದ ಆ ವ್ಯಕ್ತಿಯ ಧೈರ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ಜನರು ಪ್ರಶಂಸಿಸುತ್ತಿದ್ದಾರೆ.

https://x.com/GlobalUpdates24/status/2000143836916658366?ref_src=twsrc%5Etfw%7Ctwcamp%5Etweetembed%7Ctwterm%5E2000143836916658366%7Ctwgr%5Edc70add8e03fbf6249c32a1d46aef8685a47343c%7Ctwcon%5Es1_&ref_url=https%3A%2F%2Fkannada.asianetnews.com%2Fworld-news%2Fsydney-bondi-beach-shooting-during-jewish-festival%2Farticleshow-b7xg6g9


ಬಾಂಡಿ ಬೀಚ್​ನಲ್ಲಿ ಮೂವರು ಉಗ್ರಗಾಮಿಗಳು ನುಗ್ಗಿ ಗುಂಡಿನ ದಾಳಿ ಎಸಗಿದ್ದಾರೆ. ಇದರಲ್ಲಿ ಒಬ್ಬ ಉಗ್ರನು ಮರವೊಂದರ ಹಿಂದೆ ಅಡಗಿ ನಿಂತು ಜನರ ಮೇಲೆ ದಾಳಿ ಮಾಡಲು ಹೊಂಚು ಹಾಕುತ್ತಿರುತ್ತಾನೆ. ಅಲ್ಲೇ ಸಮೀಪ ಕಾರುಗಳ ಹಿಂದೆ ಅಡಗಿದ್ದ ಸಾರ್ವಜನಿಕ ವ್ಯಕ್ತಿಯೊಬ್ಬರು ಹಿಂದಿನಿಂದ ಸದ್ದಿಲ್ಲದೇ ಹೋಗಿ ಉಗ್ರನ ಗುತ್ತಿಗೆ ಹಿಡಿದು ರೈಫಲ್ ಕಿತ್ತುಕೊಳ್ಳುತ್ತಾರೆ. ಈ ರಭಸಕ್ಕೆ ಉಗ್ರನು ಕೆಳಗೆ ಬಿದ್ದು ಓಡಲು ಯತ್ನಿಸಿದ್ದಾನೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಈ ಗುಂಡಿನ ದಾಳಿಯಲ್ಲಿ ಸುಮಾರು 50 ಸುತ್ತು ಗುಂಡು ಹಾರಿಸಲಾಗಿದೆ. ಪ್ರತಿದಾಳಿಯಲ್ಲಿ ಒಬ್ಬ ಬಂದೂಕುಧಾರಿ ಹತನಾಗಿದ್ದು, ಪೊಲೀಸರು ಸೇರಿದಂತೆ ಸುಮಾರು 11 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೋಂಡಿ ಬೀಚ್‌ನ ದೃಶ್ಯಗಳು ಆತಂಕಕಾರಿಯಾಗಿವೆ ಎಂದು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಹೇಳಿದ್ದಾರೆ. ಪೊಲೀಸರು ಮತ್ತು ತುರ್ತು ಸ್ಪಂದನಾ ಸಿಬ್ಬಂದಿ ಜನರ ಪ್ರಾಣ ಉಳಿಸಲು ಸ್ಥಳದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂತ್ರಸ್ತರ ಜೊತೆ ನನ್ನ ಸಹಾನುಭೂತಿ ಇದೆ. ನಾವು NSW ಪೊಲೀಸರೊಂದಿಗೆ ಕೆಲಸ ಮಾಡುತ್ತಿದ್ದೇವೆ.

ಭಾರತೀಯ ಕಾಲಮಾನ ಮಧ್ಯಾಹ್ನ 2.17ಕ್ಕೆ (ಆಸ್ಟ್ರೇಲಿಯಾ ಕಾಲಮಾನ ಸಂಜೆ 7.47), ನ್ಯೂ ಸೌತ್ ವೇಲ್ಸ್ ಪೊಲೀಸರು X ನಲ್ಲಿ ಪೋಸ್ಟ್ ಮಾಡಿ, ಬೋಂಡಿ ಬೀಚ್‌ನಲ್ಲಿ ನಡೆಯುತ್ತಿರುವ ಸಾಮೂಹಿಕ ಗುಂಡಿನ ದಾಳಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ಎಲ್ಲರೂ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಈ ದಾಳಿಯಲ್ಲಿ ಒಬ್ಬ ದಾಳಿಕೋರ ಸೇರಿದಂತೆ 10 ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ಇನ್ನೊಬ್ಬ ಶಂಕಿತ ದಾಳಿಕೋರನ ಸ್ಥಿತಿ ಗಂಭೀರವಾಗಿದೆ. ದೃಶ್ಯಗಳಲ್ಲಿ, ಕಪ್ಪು ಬಟ್ಟೆ ಧರಿಸಿದ ಇಬ್ಬರು ದಾಳಿಕೋರರು ಜನರ ಮೇಲೆ ಗುಂಡು ಹಾರಿಸುತ್ತಿರುವುದು ಕಾಣಿಸುತ್ತಿದೆ.

ಉಗ್ರಗಾಮಿಗಳು ಯಾರು, ಯಾವ ಸಂಘಟನೆಯವರು ಎನ್ನುವ ಮಾಹಿತಿ ಇಲ್ಲ. ಆದರೆ, ಸಿಡ್ನಿಯಲ್ಲಿನ ಈ ಜನಪ್ರಿಯ ಬೀಚ್​ನಲ್ಲಿ ಯಹೂದಿಗಳ ಹನುಕ್ಕಾ ಆಚರಣೆ ಸಂಜೆ 5 ಗಂಟೆಯಿಂದಲೇ ನಡೆಯುತ್ತಿತ್ತು. ಮೂರು ದಿನಗಳ ಹಬ್ಬದಲ್ಲಿ ಇವತ್ತಿನದು ಮೊದಲ ದಿನವಾಗಿತ್ತು.

error: Content is protected !!